Latest

ಕೋಪದ ಭರದಲ್ಲಿ ಗಂಡನ ನಾಲಗೆಯನ್ನೇ ಕಚ್ಚಿ ತುಂಡು ಮಾಡಿದ ಪತ್ನಿ!ತುಂಡಾದ ನಾಲಗೆ ಬಗ್ಗೆ ವೈದ್ಯರು ಕುಟುಂಬಸ್ಥರಿಗೆ ಹೇಳಿದ್ದೇನು?

453

ನ್ಯೂಸ್‌ ನಾಟೌಟ್: ಗಂಡ ಹೆಂತಿ ಅಂದ್ರೆ ಸಣ್ಣ ಸಣ್ಣ ಗಲಾಟೆಗಳು ನಡಿತಿರುತ್ತವೆ.ಕೆಲವೊಮ್ಮೆ ಈ ಜಗಳಗಳು ಅತಿರೇಕಕ್ಕೆ ತಿರುಗಿ ರಂಪ ರಾಮಾಯಣ ನಡೆಯುವುದು ಕೂಡಾ ಇದೆ. ಗಂಡ-ಹೆಂಡತಿ ನಡುವಿನ ಇಂತಹ ಹೊಡೆದಾಟ, ಬಡಿದಾಟಗಳ ಸುದ್ದಿ ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತಲೇ ಇರುತ್ತವೆ. ಇಲ್ಲೊಂದು ಅಂತಹದ್ದೇ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಗಲಾಟೆಯಲ್ಲಿ ಹೆಂಡ್ತಿ (wife) ಗಂಡನ (husband) ನಾಲಿಗೆಯನ್ನೇ ಕಚ್ಚಿ ತುಂಡು ಮಾಡಿದ್ದಾಳೆ.

ಈ ಘಟನೆ ನಡೆದಿದ್ದು, ರಾಜಸ್ಥಾನದ ಝಲಾವರ್ ಜಿಲ್ಲೆಯ ಬಕಾನಿ ಪಟ್ಟಣದಲ್ಲಿ. ಪ್ರಾಥಮಿಕ ಮಾಹಿತಿಯ ಪ್ರಕಾರ, ಗುರುವಾರ (ಮಾ. 20) ಈ ದಂಪತಿ ಯಾವುದೋ ವಿಷಯಕ್ಕೆ ಜಗಳವಾಡಿದ್ದರು. ಈ ಜಗಳ ತಾರಕಕ್ಕೇರಿ ಕೊನೆಗೆ ಕೋಪಗೊಂಡ ಹೆಂಡತಿ ತನ್ನ ಗಂಡನ ನಾಲಿಗೆಯನ್ನು ಕಚ್ಚಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗಂಡನ ನಾಲಿಗೆ ಕಚ್ಚಿದ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಕಾನಿ ಪಟ್ಟಣದ ಕನ್ಹಯ್ಯಾಲಾಲ್ ಸೈನ್ (25) ಮತ್ತು ಹತ್ತಿರದ ಸುನೆಲ್ ಗ್ರಾಮದ ರವಿನಾ ಸೈನ್ ಒಂದೂವರೆ ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಆದ್ರೆ ಈ ದಂಪತಿಯ ನಡುವೆ ಭಿನ್ನಾಭಿಪ್ರಾಯ ತಲೆದೂರಿದೆ. ಆಗಾಗ್ಗೆ ಜಗಳಗಳು ನಡೆಯುತ್ತಿದ್ದು,ಇದೀಗ ಈ ಇಬ್ಬರ ನಡುವೆ ದೊಡ್ಡ ಜಗಳವೇ ಏರ್ಪಟ್ಟಿದೆ.ಈ ಕೋಪದ ಭರದಲ್ಲಿ ಹೆಂಡತಿ ತನ್ನ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ್ದಾಳೆ. ಗಾಯಗೊಂಡ ಕನ್ಹಯ್ಯಾಲಾಲ್ ನನ್ನು ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ತುಂಡಾದ ನಾಲಿಗೆಯನ್ನು ಹೊಲಿದು ಸರಿ ಮಾಡಬಹುದು ಎಂದು ವೈದ್ಯರು ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.ಸ್ವಯಂಪ್ರೇರಣೆಯಿಂದ ಗಾಯಗೊಳಿಸಿದ ಮತ್ತು ಗಂಭೀರ ಗಾಯವನ್ನುಂಟುಮಾಡಿದ ಆರೋಪದಡಿ ರವಿನಾ ಸೈನ್ (23) ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 115(2) ಮತ್ತು 118(2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

See also  ಸುಳ್ಯದ ನೆಲ್ಲೂರು ಕೆಮ್ರಾಜೆಯಲ್ಲಿ ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ..! ಕಾರಣ ನಿಗೂಢ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget