ಕ್ರೀಡೆ/ಸಿನಿಮಾವೈರಲ್ ನ್ಯೂಸ್

ರಜನಿಕಾಂತ್ ಗೆ ದೇವಸ್ಥಾನ ಕಟ್ಟಿದ್ಯಾರು..? 250Kg ತೂಕದ ತಲೈವಾ ವಿಗ್ರಹವಿರುವ ದೇಗುಲ ಎಲ್ಲಿದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

211

ನ್ಯೂಸ್ ನಾಟೌಟ್ : ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ತಮಿಳು ನಟ ರಜಿನಿಕಾಂತ್ ಅವರಿ​ಗೆ ಇಲ್ಲೊಬ್ಬ ಕಟ್ಟಾ ಅಭಿಮಾನಿ ವಿಶೇಷ ಉಡುಗೊರೆ ನೀಡಿದ್ದಾರೆ. ತಮಿಳುನಾಡಿನ ಮಧುರೈನಲ್ಲಿರುವ ತಮ್ಮ ಮನೆಯ ಆವರಣದಲ್ಲೇ ‘ತಲೈವಾ’ಗೆ ದೇವಾಲಯ ಕಟ್ಟಿದ್ದಾರೆ. ಈ ದೇವಸ್ಥಾನದೊಳಗೆ 250 ಕೆ.ಜಿ ತೂಕದ ರಜಿನಿಕಾಂತ್ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ‘ಜೈಲರ್’ (Jailer) ಸಕ್ಸಸ್ ನಂತರ ಸಾಲು ಸಾಲು ಸಿನಿಮಾಗಳನ್ನ ಮಾಡುತ್ತಿದ್ದು, ಬ್ಯುಸಿಯಲ್ಲಿದ್ದಾರೆ. ಈ ನಡುವೆ ತಲೈವಾಗೆ ಅಭಿಮಾನಿಯೊಬ್ಬರು ಯಾರೂ ಊಹಿಸದ ವಿಶೇಷ ಉಡುಗೊರೆ ಇದಾಗಿದೆ.

ಕಾರ್ತಿಕ್‌ ಎಂಬ ಅಭಿಮಾನಿಯೊಬ್ಬರು (Rajinikanth Fans) ತಮಿಳುನಾಡಿನ ಮಧುರೈನಲ್ಲಿರುವ ತಮ್ಮ ಮನೆಯ ಆವರಣದಲ್ಲಿ ತಲೈವಾಗೆ ದೇವಸ್ಥಾನವನ್ನೇ ಕಟ್ಟಿಸಿದ್ದಾರೆ.

ದೇವಸ್ಥಾನಲ್ಲಿ 250 ಕೆ.ಜಿ ತೂಕದ ರಜನಿಕಾಂತ್‌ ಅವರ ವಿಗ್ರಹ ನಿರ್ಮಿಸಲಾಗಿದೆ. ಕಾರ್ತಿಕ್ ಪುತ್ರಿ ಅನುಶಿಯಾ ಕೂಡ ರಜನಿಕಾಂತ್ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಕಾರ್ತಿಕ್‌, ನಾನು ರಜನಿಕಾಂತ್‌ ಬಿಟ್ಟು ಬೇರೆ ಯಾವುದೇ ನಟರ ಸಿನಿಮಾ ನೋಡುವುದಿಲ್ಲ. ನಮಗೆ ಅವರೇ ದೇವರು. ಗೌರವದ ಸಂಕೇತಕ್ಕಾಗಿ ದೇವಾಲಯ ಕಟ್ಟಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಸದ್ಯ ಜೈಲರ್‌ ಸಿನಿಮಾ ಸಕ್ಸಸ್‌ ಬಳಿಕ ಸಾಲು ಸಾಲು ಸಿನಿಮಾಗಳನ್ನು ಮುಂದಿಟ್ಟುಕೊಂಡಿರುವ ರಜನಿಕಾಂತ್‌ ʻತಲೈವರ್‌ 170ʼ (Thalaivar 170) ಚಿತ್ರದಲ್ಲಿ ರಜನಿಕಾಂತ್‌ಗೆ ಬಿಗ್ ಬಿ ಜೊತೆಯಾಗುತ್ತಿದ್ದಾರೆ. 33 ವರ್ಷಗಳ ಬಳಿಕ ಮತ್ತೆ ಈ ಜೋಡಿ ಒಂದಾಗ್ತಿರೋದು ವಿಶೇಷ. ಈ ಬಗ್ಗೆ ಸ್ಪೆಷಲ್ ಪೋಸ್ಟ್‌ವೊಂದನ್ನ ತಲೈವಾ ಹಂಚಿಕೊಂಡಿದ್ದಾರೆ.

See also  ರಾಮೇಶ್ವರಂ ಕೆಫೆ ಬ್ಲಾಸ್ಟ್ ನ ಮತ್ತಿಬ್ಬರು ಆರೋಪಿಗಳ ಫೋಟೋ ಬಿಡುಗಡೆ, ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget