ಕ್ರೀಡೆ/ಸಿನಿಮಾಕ್ರೈಂವೈರಲ್ ನ್ಯೂಸ್

ರಜನೀಕಾಂತ್​ ಮೊಮ್ಮಗನನ್ನು ಹುಡುಕಿಕೊಂಡು ಮನೆಗೆ ಬಂದದ್ದೇಕೆ ಪೊಲೀಸರು? ಪೊಲೀಸರು ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದೇಕೆ?

281

ನ್ಯೂಸ್ ನಾಟೌಟ್: ಸೂಪರ್​ ಸ್ಟಾರ್​ ರಜನೀಕಾಂತ್​ ಮೊಮ್ಮಗ ಹಾಗೂ ನಟ ಧನುಷ್​ ಪುತ್ರನನ್ನು ಪೊಲೀಸರು ಮನೆಗೆ ಹುಡುಕಿಕೊಂಡು ಬಂದು ಫೈನ್ ಹಾಕಿಹೋಗಿರುವುದು ಈಗ ವೈರಲ್ ಆಗುತ್ತದೆ.

ಬೈಕ್​ ಬಗ್ಗೆ ಕ್ರೇಜ್​ ಹೊಂದಿರೋ ರಜನಿಕಾಂತ್ ಮೊಮ್ಮಗ ಯಾತ್ರಾ ಟ್ರಾಫಿಕ್​ ನಿಯಮ ಉಲ್ಲಂಘಿಸಿದ ಕಾರಣ, ದಂಡ ಬಿದ್ದಿದೆ ಎನ್ನಲಾಗಿದೆ. ಇತ್ತೀಚೆಗೆ ಸೂಪರ್​ಬೈಕ್​ ಓಡಿಸಿದ ವಿಡಿಯೋ ವೈರಲ್​ ಆಗಿತ್ತು. ಅವರಿಗೆ ಇನ್ನೋರ್ವ ವ್ಯಕ್ತಿ ಬೈಕ್​ ಕಲಿಸಿಕೊಡುತ್ತಿದ್ದರು. ಈ ಸಂದರ್ಭದಲ್ಲಿ ಯಾತ್ರಾ ಹೆಲ್ಮೆಟ್​ ಧರಿಸಿರಲಿಲ್ಲ. ವೈರಲ್​ ಆದ ಈ ವಿಡಿಯೋ ನೋಡಿದ ಪೊಲೀಸರು ವಿಚಾರಣೆ ಮಾಡಿದ್ದರು ಎನ್ನಲಾಗಿದೆ.
ಹೆಲ್ಮೆಟ್​ ಇಲ್ಲದೇ ಮಾತ್ರವಲ್ಲದೇ, ಪರವಾನಗಿ ಇಲ್ಲದೆ ಬೈಕ್​ ಸವಾರಿ ಮಾಡಿದ್ದವರು ಎನ್ನಲಾಗಿದೆ. ಯಾತ್ರಾ ಬೈಕ್​ ಚಾಲನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ಕ್ರಮ ತೆಗೆದುಕೊಂಡಿದ್ದಾರೆ. ಅಲ್ಲದೆ, ಯಾತ್ರಾಗೆ ತಮಿಳುನಾಡು ಪೊಲೀಸರು ಬುದ್ಧಿ ಮಾತು ಸಹ ಹೇಳಿದ್ದಾರೆ. ವೈರಲ್ ವಿಡಿಯೋದಲ್ಲಿ ಯಾತ್ರಾ ಅವರು ಮಾಸ್ಕ್​ ಧರಿಸಿದ್ದರು. ಆದ್ದರಿಂದ ಅವರ ಗುರುತು ಪೊಲೀಸರಿಗೆ ಸಿಕ್ಕಿರಲಿಲ್ಲ ಎನ್ನಲಾಗಿದೆ.
ಬಳಿಕ ಬೈಕ್​ ನಂಬರ್​ ಪತ್ತೆ ಹಚ್ಚಿದ ಬಳಿಕ ಅದು ರಜನೀಕಾಂತ್ ಅವರ ಪುತ್ರಿ ಐಶ್ವರ್ಯಾ ಮನೆಗೆ ಸೇರಿದ್ದು ಎಂದು ತಿಳಿಯಿತು. ನಂತರ ಅಲ್ಲಿಗೆ ಪೊಲೀಸರು ದೌಡಾಯಿಸಿದ್ದಾಗ ಐಶ್ವಯಾ ಅವರು ತಮ್ಮ ಮಗ ಎಂದು ಹೇಳಿದ್ದಾರೆ. ಆ ಬಳಿಕ ಪೊಲೀಸರು ದಂಡ ಹಾಕಿದ್ದಾರೆ ಎಂದು ವರದಿ ಆಗಿದೆ.

See also  ಶಾಲಾ ಬಾಲಕಿಯ ಸೈಕಲ್ ಹಿಂಬಾಲಿಸಿ ರಸ್ತೆಯಲ್ಲಿ ಅನುಚಿತವಾಗಿ ವರ್ತಿಸಿದ ಪೊಲೀಸ್ ಅಮಾನತ್ತು! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget