ಕ್ರೀಡೆ/ಸಿನಿಮಾಕ್ರೈಂವೈರಲ್ ನ್ಯೂಸ್

“ರಜನಿಕಾಂತ್‌ ನನ್ನನ್ನು ರಹಸ್ಯವಾಗಿ ಮದುವೆಯಾಗಿದ್ದಾರೆ” ಎಂದ ಈ ನಟಿ ಯಾರು?ಏನಿದು ವಿವಾದ..? ಈ ಬಗ್ಗೆ ನಟಿ ಹೇಳಿದ್ದೇನು?

277

ನ್ಯೂಸ್ ನಾಟೌಟ್ : ಕವಿತಾ 11 ನೇ ವಯಸ್ಸಿನಲ್ಲಿ ಬಾಲನಟಿಯಾಗಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು ಆ ಬಳಿಕ ನಾಯಕಿಯಾಗಿ ನಟಿಸಿದರು. ರಜನಿ, ಶಿವಾಜಿ ಸೇರಿದಂತೆ ಪ್ರಮುಖ ನಟರೊಂದಿಗೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.ತಮಿಳಿನಲ್ಲಿ ಸೆಂತಮಿಲ್ ಪಾಟ್ಟು, ವೈದೇಹಿ ಕಲ್ಯಾಣಂ, ಸೇರಿದಂತೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಕವಿತಾ ತಮಿಳು ಮಾತ್ರವಲ್ಲದೆ ತೆಲುಗಿನಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಟಾಲಿವುಡ್ ನಲ್ಲಿ ಖ್ಯಾತ ನಟಿಯಾಗಿದ್ದಾರೆ. ಕವಿತಾ ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದರು, ಈ ವೇಳೆ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಕವಿತಾ ರಜನಿ ಜೊತೆ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸುತ್ತಿದ್ದಾಗ, ಇಬ್ಬರೂ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಗಳು ಬಂದವು. ಮೋಹನ್‌ಬಾಬು ಜೊತೆ ಸಿನಿಮಾದಲ್ಲಿ ನಟಿಸುವಾಗ ಕವಿತಾಗೆ ಈ ವಿಷಯ ತಿಳಿಯಿತು ಎನ್ನಲಾಗಿದೆ.

ಇದನ್ನು ಕೇಳಿ ಕೋಪಗೊಂಡ ಮೋಹನ್ ಬಾಬು ಕವಿತಾ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಶೂಟಿಂಗ್ ನಿಲ್ಲಿಸಿ ಕವಿತಾ ಅವರನ್ನು ಸಂಬಂಧಿಸಿದ ಪತ್ರಿಕಾ ಕಚೇರಿಗೆ ಕರೆದೊಯ್ದು ಜಗಳವಾಡಿದ್ದರು ಎನ್ನಲಾಗಿದೆ.

ನಂತರ ಪತ್ರಿಕೆ ಕಂಪನಿಯವರು ನಿರಾಕರಣೆ ಪ್ರಕಟಿಸುವುದಾಗಿ ಹೇಳಿದ್ದು, ಆ ಬಳಿಕವಷ್ಟೇ ವದಂತಿ ಅಂತ್ಯಗೊಂಡಿದೆ. ಆ ವೇಳೆ ರಜನಿಕಾಂತ್ ಜೊತೆ ನನ್ನ ಮದುವೆಯ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು ಎಂದು ಕವಿತಾ ಹೇಳಿಕೊಂಡಿದ್ದಾರೆ. ಈ ಹೇಳಿಕೆ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ.

See also  ಸಾಮಾಜಿಕ ಜಾಲತಾಣದಲ್ಲಿ ಸಿದ್ದು - ಡಿಕೆ ಫುಲ್ ಟ್ರೋಲ್! #ಕಾವೇರಿನಮ್ಮದು ಹ್ಯಾಶ್‌ ಟ್ಯಾಗ್ ಈಗ ಟ್ರೆಂಡಿಂಗ್, ಇಲ್ಲಿದೆ ಬಗೆ ಬಗೆಯ ಸಿದ್ದು - ಡಿಕೆ ಟ್ರೋಲ್ ಗಳು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget