ನ್ಯೂಸ್ ನಾಟೌಟ್ : ಭಾರತೀಯ ಸಿನಿಮಾ ರಂಗದ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ಮೇಲೆ ಗಂಭೀರ ಆರೋಪ ಮಾಡಿ ಖ್ಯಾತ ನಿರ್ಮಾಪಕ ಶ್ರೀನಿವಾಸ್ ರಾವ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶ್ರೀನಿವಾಸ್ ರಾವ್ ಜ್ಯೂನಿಯರ್ ಎನ್.ಟಿ.ಆರ್ ನಟನೆಯ ಯಮದೊಂಗ ಸಿನಿಮಾವನ್ನು ಶ್ರೀನಿವಾಸ್ ರಾವ್ ನಿರ್ಮಾಣ ಮಾಡಿದ್ದರು.
ಎಸ್.ಎಸ್ ರಾಜಮೌಳಿಯ ಆತ್ಮೀಯ ಸ್ನೇಹಿತನೂ ಆಗಿದ್ದ ಶ್ರೀನಿವಾಸ್ ರಾವ್ ಡೆತ್ ನೋಟ್ ಮತ್ತು ಸಾಯುವ ಮುನ್ನ ವಿಡಿಯೋವೊಂದನ್ನು ಮಾಡಿ, ತನ್ನ ಸಾವಿಗೆ ರಾಜಮೌಳಿ ಮತ್ತು ಅವರ ಪತ್ನಿ ರಮಾ ಕಾರಣ ಅಂತ ಹೇಳಿಕೊಂಡಿದ್ದಾರೆ. ಜೊತೆಗೆ ರಾಜಮೌಳಿ ಮತ್ತು ತನ್ನ ನಡುವಿನ ಸ್ಟೋರಿಯನ್ನು ಶ್ರೀನಿವಾಸ್ ಹಂಚಿಕೊಂಡಿದ್ದಾರೆ.
Star Director #SSRajamouli in Big controversy
వివాదంలో స్టార్ డైరెక్టర్ ఎస్.ఎస్. రాజమౌళిpic.twitter.com/Jw7PhoqFEg
— Milagro Movies (@MilagroMovies) February 27, 2025
ರಾಜಮೌಳಿ ಮತ್ತು ನಾನು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದೆವು. ಆ ಹುಡುಗಿಯನ್ನು ರಾಜಮೌಳಿ ತ್ಯಾಗ ಮಾಡುವಂತೆ ನನಗೆ ಹೇಳಿದ. ಹಾಗಾಗಿ ನಾನು ಆ ಹುಡುಗಿಯನ್ನು ರಾಜಮೌಳಿಗೆ ಬಿಟ್ಟು ಕೊಟ್ಟೆ. ಅಲ್ಲಿಂದ ನಾನು ಮದುವೆ ಆಗಿಲ್ಲ. ರಾಜಮೌಳಿಗೂ ನನಗೂ 34 ವರ್ಷದ ಸ್ನೇಹ. ಇತ್ತೀಚೆಗೆ ಸಣ್ಣ ಮನಸ್ತಾಪ ಆಯಿತು. ನಾನು ನಮ್ಮ ಲವ್ ಸ್ಟೋರಿಯನ್ನು ಸಿನಿಮಾ ಮಾಡೋದಾಗಿ ಹೇಳಿದೆ. ಅಲ್ಲಿಂದ ರಾಜಮೌಳಿ ನಿರಂತರವಾಗಿ ನನಗೆ ಟಾರ್ಚರ್ ಮಾಡಲು ಶುರು ಮಾಡಿದ ಅಂತ ಡೆತ್ ನೋಟ್ ನಲ್ಲಿ ಶ್ರೀನಿವಾಸ್ ರಾವ್ ಬರೆದಿದ್ದಾರೆ.
ಇದನ್ನೂ ಓದಿ:ದೇಶದ 28 ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ..! ನಿರುದ್ಯೋಗಿಗಳೇ ಈತನ ಬಂಡವಾಳ..!
ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ರಾಜಮೌಳಿ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಈವರೆಗೂ ಶ್ರೀನಿವಾಸ್ ರಾವ್ ಅವರ ಮೃತದೇಹ ಸಿಕ್ಕಿಲ್ಲ ಅನ್ನೋ ಮಾಹಿತಿಯೂ ಇದೆ.