ಬೆಂಗಳೂರು

ವಿಧಾನಸೌಧದ ಕ್ಯಾಂಟೀನ್‌ಗೂ ನುಗ್ಗಿದ ಮಳೆ ನೀರು

368

ನ್ಯೂಸ್ ನಾಟೌಟ್ :  ಭಾನುವಾರ ರಾತ್ರಿ ಸುರಿದ ಮಳೆಗೆ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ ಪಕ್ಕದಲ್ಲಿರುವ ಕ್ಯಾಂಟೀನ್‌ಗೂ ನೀರು ನುಗ್ಗಿದೆ. ಕ್ಯಾಂಟೀನ್‌ನಲ್ಲಿ ಸುಮಾರು ಮೂರು ಅಡಿಗಳಿಗೂ ಹೆಚ್ಚು ನೀರು ನಿಂತಿತ್ತು ಎಂದು ಸಿಬ್ಬಂದಿ ತಿಳಿಸಿದರು.

ಸೋಮವಾರ ಸಿಬ್ಬಂದಿ ನೀರು ತೆಗೆಯಲು ಹರಸಾಹಸ ಮಾಡಿದರು. ಭಾನುವಾರ ರಾತ್ರಿ ಪೂರ್ತಿ ಸುರಿದಿದ್ದು, ನಗರದಲ್ಲಿ 140 ಮಿ.ಮೀ. ಮಳೆಯಾಗಿದೆ. ಭಾರಿ ಮಳೆಯಿಂದ ರಸ್ತೆಗಳು ಹೊಳೆಯಂತಾಗಿವೆ. ಪೂರ್ವಭಾಗದಲ್ಲಿನ ಬಡಾವಣೆಗಳು ಕೆರೆಗಳಂತಾಗಿದ್ದು, ಕೆರೆಗಳ ಕೋಡಿ ಹರಿದು ಹೋಗಲು ಜಾಗವಿಲ್ಲದ ಕಾರಣ ಮಳೆ ನಿಂತರೂ ಬಡಾವಣೆಗಳಿಗೆ ನೀರು ನುಗ್ಗುವುದು ನಿಂತಿಲ್ಲ. ರಸ್ತೆಗಳಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳ ದಟ್ಟಣೆ ಇತ್ತು.

See also  ವರ್ತೂರು ಸಂತೋಷ್ 'ಕಿತ್ತೋದ್ ನನ್ ಮಗ' ಎಂದ ನಟ ಜಗ್ಗೇಶ್ ವಿರುದ್ಧ ಜನಾಕ್ರೋಶ..! ಕ್ಷಮೆ ಕೇಳದಿದ್ರೆ ಜಗ್ಗೇಶ್​ ಮನೆಗೆ ಮುತ್ತಿಗೆ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget