ಕರಾವಳಿಕಾಸರಗೋಡು

ಮಳೆಗಾಲ ತಂದ ಆಪತ್ತು, ರಸ್ತೆಗೆ ಕುಸಿದ ಗುಡ್ಡ, ಸುಳ್ಯ -ಪಾಣತ್ತೂರು ರಸ್ತೆ ಸಂಚಾರಕ್ಕೆ ಅಡ್ಡಿ

ನ್ಯೂಸ್ ನಾಟೌಟ್: ಮಳೆಗಾಲದ ಅಬ್ಬರ ಶುರುವಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ವಿವಿಧ ಪ್ರಾಕೃತಿಕ ಅನಾಹುತಗಳಾಗುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಇದೀಗ ನೆರೆಯ ಕೇರಳದ ಸಮೀಪವಿರುವ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಸುಳ್ಯದಿಂದ ಕೇರಳದ ಪಾಣತ್ತೂರು ಸಂಪರ್ಕಿಸುವ ಕಲ್ಲಪಳ್ಳಿಯಲ್ಲಿ ಗುಡ್ಡದಿಂದ ಮಣ್ಣು ರಸ್ತೆಗೆ ಕುಸಿದಿದೆ. ಇದರಿಂದ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು. ಬಳಿಕ ಸ್ಥಳೀಯರು ಸೇರಿ ಮಣ್ಣು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು. ಇನ್ನೂ ಮಳೆ ಮುಂದುವರಿದರೆ ಗುಡ್ಡ ಇನ್ನಷ್ಟು ಕುಸಿಯುವ ಅಪಾಯ ಎದುರಾಗಿದ್ದು ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಎಚ್ಚರಿಕೆಯಿಂದ ಪ್ರಯಾಣಿಸಬೇಕು ಎಂದು ತಿಳಿಸಲಾಗಿದೆ.

Related posts

ಸುಳ್ಯ:ಖಾಲಿ ಸಿಲಿಂಡರ್‌ ಇರಿಸಿ ಗ್ಯಾಸ್‌ ತುಂಬಿದ್ದ ಸಿಲಿಂಡರ್‌ ಹೊತ್ತೊಯ್ದ ಕಳ್ಳ..!ಮನೆ ಮಂದಿ ಇರುವಾಗಲೇ ಕಳ್ಳತನ ಮಾಡಿದ ಆ ವ್ಯಕ್ತಿ ಯಾರು?ಘಟನೆ ಬೆಳಕಿಗೆ ಬಂದಿದ್ದು ಹೇಗೆ?

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್ ಕನ್ಫರ್ಮ್​..! ಡಿಫರೆಂಟ್​ ಆಗಿ ಸಿಹಿ ಸುದ್ದಿ ನೀಡಿದ ಡೀಪ್ ವೀರ್‌..!

ನಾಪತ್ತೆಯಾಗಿದ್ದ ವಿದ್ಯಾರ್ಥಿ ಮೃತದೇಹ ರೈಲ್ವೆ ಹಳಿಯಲ್ಲಿ ಪತ್ತೆ,ಶಾಲೆಗೆ ಹೋಗಿ ಬರುತ್ತೇನೆ ಎಂದವ ಮರಳಿ ಬರಲೇ ಇಲ್ಲ