ಕರಾವಳಿಕೊಡಗು

ಸುಬ್ರಹ್ಮಣ್ಯದಲ್ಲಿ ಸಿಡಿಲಿನ ಹೊಡೆತಕ್ಕೆ ನಿಂತ ನವ ವಿವಾಹಿತನ ಉಸಿರು, ಮಡಿಕೇರಿಯ ಕೂಲಿ ಕಾರ್ಮಿಕನಿಗೂ ಗಂಭೀರ ಗಾಯ

58
Spread the love

ನ್ಯೂಸ್ ನಾಟೌಟ್: ಕೆಲವು ಸಲ ಬದುಕಿನ ಕಥೆ ಹೇಗೆ ಬೇಕಾದರೂ ಮುಗಿಯಬಹುದು. ಕಳೆದ ಹತ್ತು ದಿನಗಳ ಹಿಂದೆಯಷ್ಟೇ ಮದುವೆಯಾಗಿ ಬದುಕಿನ ಬಗ್ಗೆ ಸಾವಿರ ಕನಸು ಕಟ್ಟಿಕೊಂಡಿದ್ದ ಕಡಬ ತಾಲೂಕಿನ ಸುಬ್ರಹ್ಮಣ್ಯದ ಯುವಕ ಸಿಡಿಲು ಬಡಿದು ದುರಂತ ಸಾವಿಗೀಡಾಗಿದ್ದಾರೆ.

ಮೃತರನ್ನು ಸೋಮಸುಂದರ್ (34) ಎಂದು ಗುರುತಿಸಲಾಗಿದೆ. ಸಂಜೆ ವೇಳೆ ಸುಬ್ರಮಣ್ಯ ಭಾಗದಲ್ಲಿ ಗುಡುಗು ಸಿಡಿಲು ಸಹಿತ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಮನೆ ಅಂಗಳದಲ್ಲಿ ಅಡಿಕೆಯನ್ನು ಯುವಕ ರಾಶಿ ಮಾಡುತ್ತಿದ್ದ. ಈ ವೇಳೆ ಸೋಮ ಸುಂದರ್‌ಗೆ ಸಿಡಿಲು ಬಡಿದಿದ್ದರಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಪ್ರತ್ಯೇಕ ಘಟನೆಯಲ್ಲಿ ಸಿಡಿಲು ಬಡಿದು ಅಸ್ಸಾಂ ಮೂಲದ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಮಡಿಕೇರಿ ಸಮೀಪದ ಬೆಟ್ಟಗೇರಿಯಲ್ಲಿ ನಡೆದಿದೆ. ಕಾರ್ಮಿಕ ಪ್ರಮಾತ್ ಗರ್ಮಾನಿ (37) ಗಾಯಾಳು. ಮನೆಯ ಹೊರಭಾಗದಲ್ಲಿ ನಿಂತಿದ್ದಾಗ ಕಾರ್ಮಿಕನಿಗೆ ಸಿಡಿಲು ಬಡಿದಿದೆ. ಕಾರ್ಮಿಕನಿಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

See also  ಸಮಾಜಮುಖಿ ಕಾರ್ಯಕ್ಕೆ ಹಣ ನೀಡಿ ಮಾದರಿಯಾದ ಸುಳ್ಯದ ಶಿಕ್ಷಣ ಇಲಾಖೆ ನೌಕರ!
  Ad Widget   Ad Widget   Ad Widget   Ad Widget