ಕರಾವಳಿಬೆಂಗಳೂರು

ಸಂಪಾಜೆಯಲ್ಲಿ ಮಧ್ಯ ರಾತ್ರಿ ಮಳೆ, ಪ್ರವಾಹ, ಜನ ತತ್ತರ

ನ್ಯೂಸ್ ನಾಟೌಟ್: ಸೋಮವಾರ ತಡರಾತ್ರಿ (೨.೩೦ಕ್ಕೆ) ಸಂಪಾಜೆಯಲ್ಲಿ ಸುರಿದ ಭಾರಿ ಮಳೆಯಿಂದ ಕೆಲವು ಮನೆಗಳಿಗೆ ಹೊಳೆ ನೀರು ನುಗ್ಗಿದ ಘಟನೆ ನಡೆದಿದೆ.

ಸಂಪಾಜೆಯ ಹೈಸ್ಕೂಲ್ ರೋಡ್ ಸಮೀಪವಿರುವ ಗಣೇಶ್ ಅನ್ನುವವರ ಮನೆ ಹಾಗೂ ಗ್ಯಾರೇಜ್‌ ಹೊಳೆ ನೀರು ನುಗ್ಗಿದೆ. ಉಳಿದಂತೆ ಅದೇ ಮನೆಯ ಸಮೀಪವಿರುವ ಶ್ರೀಜಿತ್ ಅವರ ಮನೆಗೂ ನೀರು ನುಗ್ಗಿದೆ. ಅಲ್ಲದೆ ಕಲ್ಲುಗುಂಡಿಯ ಆಟೋ ಚಾಲಕ ಸುಧಾಕರ್ ಅವರ ಮನೆಗೂ ನೀರು ನುಗ್ಗಿದ್ದು ತಡರಾತ್ರಿ ಮನೆ ಮಂದಿಯೆಲ್ಲ ಆತಂಕಕ್ಕೆ ಒಳಗಾದ ಘಟನೆ ನಡೆದಿದೆ.

ಬೆಳಗ್ಗಿನ ತನಕ ನಿದ್ರೆಯಿಲ್ಲದೆ ಮಳೆಗೆ ಕೊಡೆ ಹಿಡಿದುಕೊಂಡೇ ನಿಂತುಕೊಂಡ ಕುಟುಂಬ ಸದಸ್ಯರು ಹೊಳೆ ನೀರು ಕಡಿಮೆಯಾದ ಬಳಿಕ ಮನೆಯೊಳಗೆ ಹೋಗಿ ಒಳಗೆ ತುಂಬಿಕೊಂಡಿದ್ದ ನೀರನ್ನು ಪಾತ್ರೆಗಳ ಮೂಲಕ ಹೊರಗೆ ತೆಗೆದರು.

Related posts

ನಮಾಜ್ ವೇಳೆ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಪ್ರಕರಣ: ಪರಿಸ್ಥಿತಿ ಉದ್ವಿಗ್ನ..! ಶಾಸಕರನ್ನೇ ಎಳೆದಾಡಿದ ಪೊಲೀಸರು..!

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ 21ನೇ ಆರೋಪಿ ಅರೆಸ್ಟ್..! ಪ್ರಮುಖ ಕೊಲೆ ಆರೋಪಿಯನ್ನು ಚೆನ್ನೈಗೆ ಕಳುಹಿಸಿ ಪರಾರಿಯಾಗಲು ನೆರವು ನೀಡಿದ್ದವನ ಬಂಧನ..!

ಪಂಜ: 4 ದಿನದಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಹೊಳೆಯಲ್ಲಿ ಪತ್ತೆ..! ಸುಳ್ಯದ ಯುವಕರಿಂದ ಕಾರ್ಯಾಚರಣೆ..!