ನ್ಯೂಸ್ ನಾಟೌಟ್: ಸುಳ್ಯಕ್ಕೆ ಬಹು ದಿನಗಳ ನಂತರ ಮಳೆ ಆಗಮನವಾಗಿದೆ. ಭಾರಿ ಗುಡುಗು-ಸಿಡಿಲಿನೊಂದಿಗೆ ಇಂದು ಸಂಜೆ (ಮೇ೧೧) ಸುಳ್ಯ ನಗರದ ಹಾಗೂ ಸುತ್ತಮುತ್ತ ಮಳೆ ಸುರಿಯಿತು. ಇಡೀ ವಾತಾವರಣ ತಂಪುಗೊಂಡಿತು. ಸಂಪಾಜೆ, ಕಲ್ಲುಗುಂಡಿ, ಗೂನಡ್ಕ ಭಾಗದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಮಳೆ ಬಂದಿತ್ತು. ಮಡಿಕೇರಿ, ದೇವರಕೊಲ್ಲಿ, ಮದೆನಾಡಿಗೂ ಮಳೆಯ ಸಿಂಚನ ಆಗಿತ್ತು. ಇದೀಗ ಸುಳ್ಯಕ್ಕೂ ಮಳೆ ಬಂದಿರುವುದು ಜನರ ಮುಖದಲ್ಲಿ ಖುಷಿ ಮೂಡಿಸಿದೆ.