ಬೆಂಗಳೂರು

ಸುಡು ಬಿಸಿಲಿಗೆ ಬೆಂಗಳೂರಿನಲ್ಲಿ ತಂಪೆರೆದ ಮಳೆರಾಯ..! ಮಧ್ಯಾಹ್ನ 3 ಗಂಟೆಯಿಂದ ಗುಡುಗು ಸಹಿತ ಮಳೆ

ನ್ಯೂಸ್ ನಾಟೌಟ್: ಈ ಬಿಸಿಲಿನ ಬೇಗೆಗೆ ರಾಜಧಾನಿ ಬೆಂಗಳೂರಲ್ಲಿ ಒಂದು ಸಣ್ಣ ಹನಿಯು ಮಳೆ ಈ ವರ್ಷ ಬಿದ್ದಿರಲಿಲ್ಲ. ಬೆಂಗಳೂರು ಕರಗ ಸಮಯದಲ್ಲಿ ಸಣ್ಣ ಪ್ರಮಾಣದಲ್ಲಿ ಆದರೂ ಮಳೆ ಬಂದೇ ಬರುತ್ತೆ ಎಂಬ ನಂಬಿಕೆ ಇತ್ತು. ಆದರೆ ಆಗಲೂ ಮಳೆಯು ಕಾಣಲಿಲ್ಲ. ಇದೀಗ ಬಿಸಿಲ ಧಗೆಯಿಂದ ಸುಸ್ತಾಗಿದ್ದ ಮಂದಿಗೆ ಮಳೆಯು ತನ್ನ ಭರ್ಜರಿ ಉಡುಗೊರೆ ನೀಡಿದೆ.

ಮಳೆರಾಯ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾನೆ. ಇದರಿಂದಾಗಿ ಸೋಶಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್ ಎಂದು ಬೆಂಗಳೂರಿಗರಿಗೆ ವಿಷ್‌ ಮಾಡಿದ್ದಾರೆ. ಜತೆಗೆ ಟ್ವಿಟರ್‌, ಇನ್ಸ್ಟಾಗ್ರಾಂನಲ್ಲಿ Bengaluru rains ಹ್ಯಾಶ್‌ ಟ್ಯಾಗ್‌ ಹಾಕಿ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತೂ-ಇಂತೂ ಬೆಂಗಳೂರಲ್ಲಿ ಮಳೆ ಬಂತಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಶಿವಾಜಿನಗರ, ಮಲ್ಲೇಶ್ವರಂ, ವಿಧಾನಸೌಧ, ರಾಜಾಜಿನಗರ, ರೇಸ್ ಕೋರ್ಸ್, ಮೆಜೆಸ್ಟಿಕ್, ಮಹಾರಾಣಿ ಕಾಲೇಜು, ಸಿಐಡಿ ಆಫೀಸ್, ಪ್ಯಾಲೇಸ್ ರಸ್ತೆಯಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಮಧ್ಯಾಹ್ನ ಮೂರು ಗಂಟೆ ಸಮಯವು ರಾತ್ರಿಯಂತೆ ಕತ್ತಲೆ ಆವರಿಸಿತ್ತು. ದಿಢೀರ್ ಮಳೆಗೆ ದ್ವಿಚಕ್ರ ವಾಹನ ಸವಾರರು ಸೇತುವೆ ಕೆಳಗೆ ಹಾಗೂ ಬಸ್‌ ನಿಲ್ದಾಣದಲ್ಲಿ ಆಶ್ರಯ ಪಡೆದರು.

Related posts

ಭಾರತ ಮೂಲದ ಯುಕೆ ಪ್ರಧಾನಿ ರಿಷಿ ಸುನಕ್ ಗೆ ಸೋಲು..! ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಗೆ ಟ್ರೋಲ್ ಕಾಟ..!

ತಾನೇ ದುಡಿಯುತ್ತಿದ್ದ ಕಂಪೆನಿಯಿಂದ ಲ್ಯಾಪ್-ಟಾಪ್ ಕದ್ದವನಿಗಿತ್ತು ವಿಚಿತ್ರ ಕಾರಣ..! 22 ಲಕ್ಷ ಮೌಲ್ಯದ 50 ಲ್ಯಾಪ್-ಟಾಪ್ ಸೀಜ್ ಮಾಡಿದ ಪೊಲೀಸರು..!

ತಾಯಿಯ ಶವದೊಂದಿಗೆ ಎರಡು ದಿನ ಕಳೆದ ಬಾಲಕ !