ಕ್ರೈಂ

ಕಾಣಿಯೂರು: ರೈಲ್ವೆ ಟ್ರ್ಯಾಕ್ ನಲ್ಲಿ ವ್ಯಕ್ತಿಯ ಶವ ಪತ್ತೆ

ಕಾಣಿಯೂರು: ಇದ್ದಕ್ಕಿದ್ದಂತೆ ಮನೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಣಿಯೂರು ಸಮೀಪದ ರೈಲ್ವೆ ಟ್ರ್ಯಾಕ್ ನಲ್ಲಿ ಪತ್ತೆಯಾಗಿದೆ. ರೈಲು ಗುದ್ದಿ ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ.

ಮೃತರನ್ನು ಬೆಳಂದೂರು ಗ್ರಾಮದ ಅಬೀರ ನಿವಾಸಿ ದಿ.ರಾಮಯ್ಯ ಪೂಜಾರಿ ಅವರ ಪುತ್ರ ದಿವಾಕರ ಪೂಜಾರಿ ಎಂದು ಗುರುತಿಸಲಾಗಿದೆ. ಎ 28ರಂದು ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದರು. ಕುಟುಂಬ ಸದಸ್ಯರಿಂದ ನಾಪತ್ತೆಯಾಗಿದ್ದ ವ್ಯಕ್ತಿಗಾಗಿ ರಾತ್ರಿಯಿಂದಲೇ ಹುಡುಕಾಟ ಶುರುವಾಗಿತ್ತು. ಎ 29ರ ಬೆಳಗ್ಗೆ ಅವರ ಮೃತ ದೇಹ ರೈಲ್ವೆ ಟ್ರ್ಯಾಕ್ ಬಳಿ ಪತ್ತೆಯಾಗಿದೆ . ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೃತರು ಪತ್ನಿ, ಪುತ್ರಿ, ಸಹೋದರರು, ಸಹೋದರಿಯರನ್ನು ಅಗಲಿದ್ದಾರೆ.

Related posts

ಪಾಕ್ ನ ಶಂಕಿತ ಗೂಢಚಾರಿ ಬಂಧನ..! ಪೊಲೀಸ್ ತನಿಖೆಯಲ್ಲಿ ಬಯಲಾದ ರಹಸ್ಯವೇನು? ಗುಪ್ತಚರ ಇಲಾಖೆ ಹೇಳಿದ್ದೇನು?

ಆಧಾರ್ ಗೆ ಸಿಮ್ ಕಾರ್ಡ್ ಲಿಂಕ್ ಮಾಡೋಕೆ ಹೋಗಿ 80 ಲಕ್ಷ ಕಳೆದುಕೊಂಡ ಮಹಿಳೆ..! ಇಲ್ಲಿದೆ ಸಂಪೂರ್ಣ ಕಹಾನಿ..!

ರಾತ್ರೋರಾತ್ರಿ ಕಾಣೆಯಾದ 89 ಹುಡುಗಿಯರು..! ಬಾಲಕಿಯರ ಹಾಸ್ಟೆಲ್‌ನಲ್ಲಿ ಏನು ನಡೆಯುತ್ತಿದೆ? ಜಿಲ್ಲಾಧಿಕಾರಿ ದಿಢೀರ್ ಭೇಟಿಯಿಂದ ರಹಸ್ಯ ಬಯಲು!