ಕ್ರೈಂವಿಡಿಯೋವೈರಲ್ ನ್ಯೂಸ್

ರೈಲಿನಿಂದ ಇಳಿಯುವಾಗ ತಾಯಿಯ ಕೈತಪ್ಪಿ ಮೋರಿಗೆ ಬಿದ್ದ 4 ತಿಂಗಳ ಮಗು!ತಾಯಿಯ ಕಣ್ಣೆದುರೇ ಕೊಚ್ಚಿ ಹೋದ ಹಸುಗೂಸು! ಮುಂದೇನಾಯ್ತು..?

212

ನ್ಯೂಸ್‌ ನಾಟೌಟ್‌: ರೈಲಿನಿಂದ ಇಳಿಯುವಾಗ ಅಚಾನಕ್ಕಾಗಿ ತಾಯಿಯ ಕೈಯಿಂದ ಜಾರಿ ನಾಲ್ಕು ತಿಂಗಳ ಹಸುಗೂಸು ರೈಲ್ವೇ ಹಳಿಗಳ ಪಕ್ಕದಲ್ಲಿದ್ದ ಮೋರಿಗೆ ಬಿದ್ದು, ಕೊಚ್ಚಿ ಹೋದ ಕರುಳು ಹಿಂಡುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ಬುಧವಾರ ನಡೆದಿದೆ.
ಠಾಕುರ್ಲಿ ಮತ್ತು ಕಲ್ಯಾಣ್ ರೈಲು ನಿಲ್ದಾಣಗಳ ನಡುವೆ ಅವಘಡ ನಡೆದಿದೆ. ರಾಜ್ಯದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಹಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅದರಂತೆ ನಿನ್ನೆ (ಬುಧವಾರ) ಮುಂಬೈನಿಂದ ಹೊರಟಿದ್ದ ರೈಲು ವಿಪರೀತ ಮಳೆಯಿಂದಾಗಿ ಠಾಕುರ್ಲಿ ಮತ್ತು ಕಲ್ಯಾಣ್ ರೈಲು ನಿಲ್ದಾಣಗಳ ಮಧ್ಯೆ ನಿಂತಿತ್ತು. ಮುಂದೆ ಸಂಚರಿಸಲು ಸಾಧ್ಯವಾಗದ ಕಾರಣ ಜನರು ರೈಲಿನಿಂದ ಇಳಿದು ಹೋಗುತ್ತಿದ್ದರು.

ಈ ವೇಳೆ ಮಹಿಳೆಯ ಕೈಯಿಂದ ಮಗು ಜಾರಿ ಪಕ್ಕದಲ್ಲೇ ಇದ್ದ ಚರಂಡಿ ನಾಲೆಗೆ ಬಿದ್ದಿದೆ. ಮಳೆ ನೀರಿನಿಂದ ರಭಸವಾಗಿ ಹರಿಯುತ್ತಿರುವ ನಾಲೆಯಲ್ಲಿ ಮಗು ತಾಯಿಯ ಕಣ್ಣೆದುರೇ ಕೊಚ್ಚಿ ಹೋಯಿತು. ಮಗುವನ್ನು ಕಳೆದುಕೊಂಡ ತಾಯಿಯ ರೋಧನೆ ಮುಗಿಲುಮುಟ್ಟುವಂತಿತ್ತು.

ರೈಲು ಸಣ್ಣ ಸೇತುವೆಯ ಮೇಲೆ ನಿಂತಿದ್ದು, ಒಬ್ಬರಿಗೆ ನಡೆದು ಹೋಗುವಷ್ಟು ಜಾಗವಿರುವುದನ್ನು ದೃಶ್ಯದಲ್ಲಿ ನೋಡಬಹುದು. ಇಂಥ ಕಡಿದಾದ ಸ್ಥಳದಲ್ಲಿ ಮಹಿಳೆ ಹೋಗುತ್ತಿದ್ದಾಗ ಕಾಲು ಜಾರಿದೆ. ಮಗು ನಾಲೆಗೆ ಬಿದ್ದಿದೆ. ಹಸುಗೂಸು ನೀರಿನಲ್ಲಿ ಕೊಚ್ಚಿ ಹೋಗಿರುವುದನ್ನು ಸಹ ಪ್ರಯಾಣಿಕರು ಕೂಡ ನೋಡಿದ್ದಾರೆ.
ವಿಷಯ ತಿಳಿದ ಪೊಲೀಸ್​​ ಮತ್ತು ಅಗ್ನಿಶಾಮಕ ಸಿಬ್ಬಂದಿ ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. “ನಾಲೆಯಲ್ಲಿ ಮಗು ಎಷ್ಟು ದೂರ ಹರಿದು ಹೋಗಿದೆ ಎಂಬುದು ಗೊತ್ತಾಗಿಲ್ಲ. ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ” ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

See also  ಟೀ ಚೆಲ್ಲಿದ್ದಕ್ಕೇ 432 ಕೋಟಿ ರೂ ದಂಡ ವಿಧಿಸಿದ ಕೋರ್ಟ್..! ಏನಿದು ವಿಚಿತ್ರ ಪ್ರಕರಣ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget