ನ್ಯೂಸ್ ನಾಟೌಟ್: ತಂದೆಯಾದವನು ತನ್ನ ಮಗ ಹಾಗೂ ಮಗಳಿಗಾಗಿ ತನ್ನ ಪ್ರಾಣ ಬೇಕಾದ್ರೂ ಕೊಡಲು ಸಿದ್ಧವಿರುತ್ತಾನೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಂತಿದೆ. ಚಲಿಸುವ ರೈಲಿನ ಕೆಳಗೆ ಬಿದ್ದ ತನ್ನ ಮಗಳನ್ನು ತಂದೆಯೊಬ್ಬನು ರಕ್ಷಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತನ್ನ ಪ್ರಾಣವನ್ನು ಲೆಕ್ಕಿಸದೇ ಮಗಳನ್ನು ರಕ್ಷಿಸಿದ ಈ ವ್ಯಕ್ತಿಯ ಧೈರ್ಯವಂತಿಕೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಈಜಿಪ್ಟ್ ನ ಕೈರೋ ಎಂಬಲ್ಲಿ ಈ ಘಟನೆ ನಡೆದಿದೆ.
@awkwardgoogle ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ರೈಲ್ವೆ ಫ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಪುಟಾಣಿಯೊಬ್ಬಳು ರೈಲು ಹಾಗೂ ಫ್ಲಾಟ್ ಫಾರ್ಮ್ ನಡುವಿನ ಕಿರಿದಾದ ಜಾಗದಲ್ಲಿ ಬಿದ್ದು ಅಪಾಯದಲ್ಲಿ ಸಿಲುಕಿಕೊಂಡಿದ್ದಾಳೆ. ಇತ್ತ ರೈಲೊಂದು ನಿಲ್ದಾಣದ ಕಡೆಗೆ ವೇಗವಾಗಿ ಬರುತ್ತಿದ್ದು, ಈ ಪುಟ್ಟ ಹುಡುಗಿಯನ್ನು ನೋಡಿ ಅಲ್ಲಿದ್ದ ಜನರು ಕಿರುಚಲು ಪ್ರಾರಂಭಿಸಿದ್ದಾರೆ. ಆದರೆ ಈ ಪುಟಾಣಿಯ ತಂದೆಯೂ ಮಾತ್ರ ಹಿಂದೆ ಮುಂದೆ ನೋಡದೇ ರೈಲಿನ ಹಳಿಗೆ ಜಿಗಿದು ಮಗಳನ್ನು ತಬ್ಬಿಕೊಂಡು ಅಲ್ಲೇ ಮಲಗಿದ್ದಾರೆ. ಈ ಘಟನೆಯಲ್ಲಿ ತಂದೆ ಮಗಳಿಗೆ ಯಾವುದೇ ಗಾಯಗಳಾಗಿಲ್ಲ. ಈ ದೃಶ್ಯವನ್ನು ತಮ್ಮ ಕಣ್ಣಾರೆ ನೋಡಿದ ಪ್ರಯಾಣಿಕರು ತಂದೆಯನ್ನು ಮೆಚ್ಚಿಕೊಂಡಿದ್ದಾರೆ. ಅಲ್ಲೇ ಇದ್ದ ಪ್ರಯಾಣಿಕರು ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
Dad shields his daughter with his body after she stepped into a train’s pathpic.twitter.com/Blqs1UISc8
— Interesting things (@awkwardgoogle) June 16, 2025
ಜೂನ್ 16 ರಂದು ಶೇರ್ ಮಾಡಲಾದ ಈ ವಿಡಿಯೋವೊಂದು 20.1 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಹಲವರ ಮೆಚ್ಚುಗೆ ಪಡೆದಿದೆ.