ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಚಲಿಸುತ್ತಿದ್ದ ರೈಲಿನ ಮೇಲೆ ಕಲ್ಲು ತೂರಿದ ಯುವಕ..! ಪ್ರಯಾಣಿಕನ ತಲೆ ಸೀಳಿದ ಕಲ್ಲು..! ಇಲ್ಲಿದೆ ವೈರಲ್ ವಿಡಿಯೋ

187

ನ್ಯೂಸ್‌ ನಾಟೌಟ್‌: ಚಲಿಸುತ್ತಿದ್ದ ರೈಲಿನ ಮೇಲೆ ಕಿಡಿಗೇಡಿಯೋರ್ವ ಕಲ್ಲು ತೂರಾಟ ನಡೆಸಿದ್ದು, ಇದರಿಂದ ಪ್ರಯಾಣಿಕರೊಬ್ಬರು ತೀವ್ರ ಗಾಯಗೊಂಡ ಘಟನೆ ಬಿಹಾರದಲ್ಲಿ ನಡೆದಿದೆ.

ಕಿಡಿಗೇಡಿ ಯುವಕನೋರ್ವ ರೈಲಿನ ಮೇಲೆ ತೂರಿದ ಕಲ್ಲು ಬಂದು ಪ್ರಯಾಣಿಕನ ಹಣೆಗೆ ಬಡಿದಿದ್ದು, ನೆತ್ತರು ಚಿಮ್ಮಿದೆ. ಘಟನೆಯ ಫೋಟೋ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಲ್ಲು ತೂರಿದ ಕಿಡಿಗೇಡಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಸಚಿವಾಲಯವೂ ಕೂಡ ಪ್ರತಿಕ್ರಿಯಿಸಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಾಯ್ದೆಯ ಹಲವು ಸೆಕ್ಷನ್‌ಗಳಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಅಪರಿಚಿತ ಏಕಾಂಗಿ ಯುವಕನೋರ್ವ ಚಲಿಸುತ್ತಿದ್ದ ಭಗಲ್ಪುರ್‌ ಜೈನಗರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲೆಸೆದಿದ್ದಾನೆ. ಇದು ರೈಲಿನ ಕಿಟಕಿಯ ಮೂಲಕ ಹಾದು ಹೋಗಿ ಪ್ರಯಾಣಿಕನನ್ನು ಗಾಯಗೊಳಿಸಿದೆ. ಈ ವಿಚಾರವನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಗಾಯಗೊಂಡವರು ಹಾಗೂ ಕಲ್ಲು ಎಸೆದವ ಇಬ್ಬರ ಫೋಟೋವನ್ನು ಕೂಡ ಹಂಚಿಕೊಂಡಿದ್ದರು.

Click

https://newsnotout.com/2024/08/cctv-video-viral-bengaluru-women-issue-during-walking-in-early-morning/
https://newsnotout.com/2024/08/kodagu-family-are-re-located-kannada-news-landslide-fear/
https://newsnotout.com/2024/08/airplane-kannada-news-viral-issue-emergency-landing/

https://newsnotout.com/2024/08/wayanad-kannada-news-first-person-who-called-emergency-call-about-incident/ https://newsnotout.com/2024/08/pilgrims-kannada-news-current-shock-kannada-news-police-investigation/             

See also  ಲ್ಯಾಂಡಿಂಗ್ ವೇಳೆ ವಿಮಾನ ಪಲ್ಟಿ..! ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget