ಕ್ರೈಂವೈರಲ್ ನ್ಯೂಸ್

ಚಲಿಸುತ್ತಿರುವಾಗಲೇ ಬೇರ್ಪಟ್ಟ ರೈಲಿನ ಬೋಗಿಗಳು..! ಲೋಕೋಪೈಲಟ್ ನ ಸಮಯಪ್ರಜ್ಞೆಯಿಂದ ಉಳಿಯಿತು ಹಲವರ ಪ್ರಾಣ..!

ನ್ಯೂಸ್‌ ನಾಟೌಟ್:‌ ಮಗಧ್ ಎಕ್ಸ್‌ಪ್ರೆಸ್ ರೈಲು ಬಕ್ಸಾರ್‌ನ ತುದಿಗಂಜ್ ನಿಲ್ದಾಣದಿಂದ ಸ್ವಲ್ಪ ಮುಂದೆ ಚಲಿಸುವಾಗ ಎರಡು ಭಾಗಗಳಾಗಿ ಬೇರ್ಪಟ್ಟಿತು, ರೈಲಿನಲ್ಲಿ ಕುಳಿತಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೆಹಲಿಯಿಂದ ಇಸ್ಲಾಂಪುರಕ್ಕೆ ಹೋಗುವ ಮಗಧ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ಇಂದು(ಸೆ.8) ನಡೆದಿದೆ.

ಎಸಿ ಇರುವ ಎಸ್-7 ಕೋಚ್ ಮುಂದೆ ಹೋಯಿತು. ಉಳಿದ ಕೋಚ್‌ಗಳು ಟ್ರ್ಯಾಕ್‌ ನಲ್ಲಿ ನಿಂತಿತ್ತು. ಅಷ್ಟರಲ್ಲಿ ಲೋಕೋಪೈಲಟ್ ಕಣ್ಣಿಗೆ ಬಿದ್ದ ತಕ್ಷಣ ರೈಲನ್ನು ನಿಲ್ಲಿಸಿದ್ದಾರೆ.

ಘಟನೆಯ ನಂತರ ರೈಲ್ವೆ ಅಧಿಕಾರಿಗಳು, ಜಿಆರ್‌ಪಿ, ಆರ್‌ಪಿಎಫ್ ಪೊಲೀಸರು ಸ್ಥಳಕ್ಕೆ ಧಾವಿಸಿದರು. ರೈಲ್ವೆ ಸಚಿವಾಲಯವು ಅಪಘಾತದ ಬಗ್ಗೆ ತನಿಖೆಗೆ ಆದೇಶಿಸಿದೆ ಮತ್ತು ತನಿಖಾ ವರದಿಯನ್ನು ಕೇಳಿದೆ.

Related posts

ಬೆಳ್ತಂಗಡಿ-ಕೊಕ್ಕಡ: ಅಕ್ರಮ ಗೋಸಾಗಾಟ ವಾಹನ ತಡೆದು ಪೊಲೀಸರಿಗೊಪ್ಪಿಸಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು

‘ನ್ಯೂಸ್ ನಾಟೌಟ್’ ಹೆಸರಲ್ಲಿ ‘ಸುಳ್ಳು ಸುದ್ದಿ’ ಹಬ್ಬಿಸುತ್ತಿರುವ ಕಿಡಿಗೇಡಿಗಳು..! ಸೂಕ್ತ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಹುಷಾರ್..!

10 ರೂಪಾಯಿಯ ಆಸೆ ತೋರಿಸಿ ಬಾಲಕಿಗೆ ಲೈಂಗಿಕ ದೌರ್ಜನ್ಯ..! 70 ವರ್ಷದ ವೃದ್ಧನನ್ನು ಬಂಧಿಸಿದ ಪೊಲೀಸರು