ಕ್ರೈಂದೇಶ-ವಿದೇಶವೈರಲ್ ನ್ಯೂಸ್

ರೈಲು ಬರುತ್ತಿರುವಾಗ ಹಳಿಯಲ್ಲಿ ಸಿಲುಕಿದ ಶಾಲಾ ಬಸ್..! 40 ಮಕ್ಕಳು ಬದುಕಿದ್ದೇ ಪವಾಡ..!

ನ್ಯೂಸ್ ನಾಟೌಟ್: ರೈಲು ಬರುತ್ತಿದ್ದ ವೇಳೆ ಮಕ್ಕಳು ಪ್ರಯಾಣಿಸುತ್ತಿದ್ದ ಶಾಲಾ ಬಸ್ ರೈಲ್ವೆ ಹಳಿ ಮೇಲೆ ಸಿಲುಕಿದ್ದು, ಲೋಕೋ ಪೈಲಟ್ ಮತ್ತು ಸ್ಥಳೀಯರ ಸಮಯೋಚಿತ ಪ್ರಯತ್ನದಿಂದ 40 ವಿದ್ಯಾರ್ಥಿಗಳ ಜೀವ ಉಳಿಸಿದೆ. ಈ ಘಟನೆ ನಾಗ್ಪುರದ ಲೆವೆಲ್ ಕ್ರಾಸಿಂಗ್‌ನಲ್ಲಿ ಜು.26 ರಂದು ನಡೆದಿದೆ. ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಖಪೇರ್‌ಖೇಡಾದಲ್ಲಿ ಎಂಬಲ್ಲಿ ಈ ಘಟನೆ ನಡೆದಿದೆ. (Railway,school bus)

ಲೆವೆಲ್ ಕ್ರಾಸಿಂಗ್‌ನಲ್ಲಿ ರೆಡ್ ಸಿಗ್ನಲ್ ಇದ್ದರೂ ಶಾಲಾ ಬಸ್ ಚಾಲಕ ಬಸ್ ನಿಲ್ಲಿಸದೆ ಮುಂದೆ ಸಾಗಿದ್ದಾರೆ ಎನ್ನಲಾಗಿದೆ. ಬಸ್ ಹಳಿಗಳ ಮೇಲೆ ಇದ್ದಾಗ ಲೆವೆಲ್ ಕ್ರಾಸಿಂಗ್‌ನ ಎರಡೂ ಗೇಟ್‌ಗಳನ್ನು ಮುಚ್ಚಲಾಗಿದೆ. ಇದೇ ಸಮಯದಲ್ಲಿ ಮಧ್ಯ ಪ್ರದೇಶದ ಛಿಂದ್ವಾರಾದಿಂದ ನಾಗ್ಪುರದ ಇಟ್ವಾರಿಗೆ ಪ್ಯಾಸೆಂಜರ್ ರೈಲು ಹೋಗುತ್ತಿತ್ತು. ಕೆಲವೇ ಕ್ಷಣಗಳಲ್ಲಿ ಅಲ್ಲಿಗೆ ಆಗಮಿಸುತ್ತಿದ್ದ ರೈಲು ಚಾಲಕನಿಗೆ ರೈಲು ನಿಲ್ಲಿಸುವಂತೆ ಸೂಚಿಸಲು ಸ್ಥಳೀಯರು ಹಳಿಗಳ ಮೇಲೆ ಆಗಮಿಸಿ ಅಪಾಯದ ಬಗ್ಗೆ ಸೂಚನೆ ನೀಡಿದ್ದಾರೆ.

ಇನ್ನು ಲೆವೆಲ್ ಕ್ರಾಸಿಂಗ್ ಮಧ್ಯೆ ಶಾಲಾ ಬಸ್ ಇರುವುದನ್ನು ಕಂಡ ಗೇಟ್ ಕೀಪರ್ ವಾಕಿಟಾಕಿ ಮೂಲಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹಳಿಗಳ ಮೇಲೆ ಅನೇಕ ಜನರು ಜಮಾಯಿಸಿದ್ದನ್ನು ಗಮನಿಸಿದ ಲೋಕೋ ಪೈಲಟ್ ಏನೋ ಸರಿಯಿಲ್ಲ ಎಂದು ಅರಿತು ಬ್ರೇಕ್ ಹಾಕಿದ್ದಾರೆ. ಹೀಗಾಗಿ ರೈಲು ಲೆವೆಲ್ ಕ್ರಾಸಿಂಗ್‌ ಸಮೀಪ ಬಂದು ರೈಲು ನಿಂತಿದೆ ಎನ್ನಲಾಗಿದೆ. ನಂತರ ಹತ್ತು ನಿಮಿಷಗಳಲ್ಲಿ ಗೇಟ್ ಓಪನ್ ಮಾಡಲಾಯಿತು ಮತ್ತು ಶಾಲಾ ಬಸ್ ಸುರಕ್ಷಿತವಾಗಿ ಇನ್ನೊಂದು ಬದಿಗೆ ದಾಟಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ಲಭಿಸಿಲ್ಲ.

Click

https://newsnotout.com/2024/07/highcourt-kannada-news-tamil-nadu-viral-news-court-vertictdict/
https://newsnotout.com/2024/07/praveen-nettaru-2-year-for-todayy-kannada-news-issue-sullia/
https://newsnotout.com/2024/07/school-bus-driver-saves-children-humanity-kannada-news/
https://newsnotout.com/2024/07/street-dog-kannada-news-food-direction-animal-husbandery-kannada/
https://newsnotout.com/2024/07/lover-kannada-news-family-nomore-investigation-issue-viral/
https://newsnotout.com/2024/07/22-kannada-news-arrested-5-members-name-in-tatto-kannada-news/

Related posts

ದ.ಕ. ಜಿಲ್ಲೆಯಲ್ಲಿ ಭಾರಿ ಮಳೆಗೆ ಮನೆ ಮೇಲೆ ಕುಸಿದ ಗುಡ್ಡ, ಮಣ್ಣಿನಡಿ ಸಿಲುಕಿದ ತಾಯಿ ಸಾವು, ಪುತ್ರಿಯ ರಕ್ಷಣೆ

ಎಟಿಎಂ ಕಳ್ಳತನ ವಿಫಲವಾದದ್ದೇಗೆ..? ಕಳ್ಳತದ ವೇಳೆ 7 ಲಕ್ಷ ರೂ. ಬೆಂಕಿಗಾಹುತಿಯಾದದ್ದೇಗೆ..?

ಗೂನಡ್ಕ: ಚಲಿಸುತ್ತಿದ್ದಾಗಲೇ ದ್ವಿಚಕ್ರ ವಾಹನದ ಟೈರ್ ಬ್ಲಾಸ್ಟ್, ರಸ್ತೆಗೆ ಎಸೆಯಲ್ಪಟ್ಟ ಸವಾರನಿಗೆ ಗಾಯ