ಕ್ರೈಂರಾಜಕೀಯ

ಮೋದಿ ವಿರುದ್ಧ ಅವಹೇಳನ ಪ್ರಕರಣ: ಲೋಕಸಭೆಯಿಂದ ಅನರ್ಹಗೊಂಡ ರಾಹುಲ್ ಗಾಂಧಿ ! 6 ವರ್ಷಗಳ ಕಾಲ ಅನರ್ಹತೆ ಸಾಧ್ಯತೆ!

282

ನ್ಯೂಸ್ ನಾಟೌಟ್: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಅವಹೇಳನ ಮಾಡಿದ್ದ ತಮ್ಮನ್ನು ದೋಷಿ ಎಂದು ಗುಜರಾತ್​ನ ಸೂರತ್ ನ್ಯಾಯಾಲಯ ನೀಡಿದ ಬೆನ್ನಲ್ಲೆ ರಾಹುಲ್‌ ಗಾಂಧಿ ಅವರನ್ನು ಅನರ್ಹಗೊಳಿಸಿ ಲೋಕಸಭೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ಜನಪ್ರತಿನಿಧಿಗಳ ಕಾಯ್ದೆಯ ಪ್ರಕಾರ, ಯಾವುದೇ ಜನಪ್ರತಿನಿಧಿಯನ್ನು ಯಾವುದೇ ಪ್ರಕರಣದಲ್ಲಿ ದೋಷಿ ಎಂದು ಕೋರ್ಟ್ ತೀರ್ಪು ಪ್ರಕಟಿಸಿ, 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದರೆ, ಅಂತಹ ಜನಪ್ರತಿನಿಧಿಯನ್ನು ಸದನದಿಂದ ಅನರ್ಹಗೊಳಿಸಲಾಗುತ್ತದೆ ಹಾಗೂ ಚುನಾಯಿತ ಅವಧಿ ಮುಕ್ತಾಯಗೊಂಡ ಬಳಿಕ 6 ವರ್ಷಗಳ ಕಾಲ ಅನರ್ಹತೆ ಎದುರಿಸಬೇಕಾಗುತ್ತದೆ. 

ನನ್ನ ಧರ್ಮ ಸತ್ಯ ಹಾಗೂ ಅಹಿಂಸೆಯ ಆಧಾರಿತವಾಗಿರುವುದಾಗಿದೆ. ಸತ್ಯವೇ ನನ್ನ ದೇವರು ಹಾಗೂ ಅಹಿಂಸೆಯೇ ದೈವತ್ವ ಸಾಧಿಸುವುದಕ್ಕೆ ಇರುವ ಮಾರ್ಗ ಎಂದು ಮಹಾತ್ಮಾ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. 

ಕಳ್ಳರ ಹೆಸರೆಲ್ಲ ಮೋದಿ ಎಂದೇ ಇರುತ್ತದೆ ಏಕೆ ಎಂದು ಪ್ರಶ್ನಿಸಿ ಪರೋಕ್ಷವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಅವಹೇಳನ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಮೋದಿ‘ ಎಂಬ ಉಪನಾಮದ ಬಗ್ಗೆ ಅಪಮಾನಕರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ವರಿಷ್ಠರೊಬ್ಬರು ರಾಹುಲ್ ಗಾಂಧಿ ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.

15 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ. ಜೈಲು ಶಿಕ್ಷೆ ವಿಧಿಸಿ ನಂತರ ಜಾಮೀನು ಮಂಜೂರು ಮಾಡಿದ್ದು, 30 ದಿನಗಳವರೆಗೆ ಶಿಕ್ಷೆ ಅಮಾನತುಗೊಳಿಸಿ ತೀರ್ಪು ನೀಡಿದೆ. ಈ ತೀರ್ಪಿನ ಪರಿಣಾಮದಿಂದಾಗಿ ರಾಹುಲ್ ಗಾಂಧಿ ತಮ್ಮ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ.  

See also  ಪುತ್ತೂರು: CM ಸಿದ್ದು ಸರ್ಕಾರದ "ಫ್ರೀ ಶಕ್ತಿ ಯೋಜನೆ"ಯಲ್ಲಿ ಬಸ್ ಹತ್ತಿ ಪ್ರಿಯಕರನ ನೋಡಲು ಬಂದ ಮಹಿಳೆ..! 11 ತಿಂಗಳ ಮಗುವನ್ನು ಬಿಟ್ಟು ಬಂದವಳು ನಾಪತ್ತೆ..!
Ad Widget   Ad Widget   Ad Widget   Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget