ಕ್ರೀಡೆ/ಸಿನಿಮಾರಾಜಕೀಯವೈರಲ್ ನ್ಯೂಸ್

ರಾಹುಲ್ ಗಾಂಧಿಯನ್ನು ಮದುವೆಯಾಗಲು ನಾನು ಸಿದ್ಧ ಎಂದ ಈ ಬಾಲಿವುಡ್‌ ನಟಿ! ಆದಕ್ಕೆ ಆಕೆ ಹಾಕಿರುವ ಷರತ್ತುಗಳೇನು?

179

ನ್ಯೂಸ್ ನಾಟೌಟ್ : “ನಾನು ರಾಹುಲ್‌ ಗಾಂಧಿಯವರನ್ನು ಮದುವೆಯಾಗಲು ಸಿದ್ಧಳಿದ್ದೇನೆ’ ಎಂದು ಬಾಲಿವುಡ್‌ ನಟಿ ಶೆರ್ಲಿನ್‌ ಛೋಪ್ರಾ ಹೇಳಿದ್ದಾರೆ. ಅದಕ್ಕೆ ಒಂದು ಷರತ್ತನ್ನೂ ಮುಂದಿರಿಸಿದ್ದಾರೆ. ತಮ್ಮ ಕುಲನಾಮ ಛೋಪ್ರಾ ಎಂದು ಹಾಕಲು ಸಮ್ಮತಿಸಬೇಕು ಎಂದು ಹೇಳಿದ್ದಾರೆ.

ಮುಂಬೈನ ಬಾಂದ್ರಾಬ್ಯಾಂಡ್‌ಸ್ಟಾಂಡ್‌ ಬೀಚ್‌ಗೆ ಇತ್ತೀಚಿಗೆ ಶೆರ್ಲಿನ್‌ ಛೋಪ್ರ ಬಂದಿದ್ದಾಗ ಪತ್ರಕರ್ತರು ಅವರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಮದುವೆಯಾಗಲು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಸಿದ್ಧಳಿದ್ದೇನೆ ಎಂದು ಹೇಳಿದ ಆಕೆ, ಛೋಪ್ರಾ ಎಂಬ ಕುಲನಾಮ ಮುಂದುವರಿಯಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ವೈರಲ್‌ ಆಗಿದೆ.

ಈ ನಡುವೆ ಅನರ್ಹಗೊಂಡಿದ್ದ ರಾಹುಲ್‌ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಮರುಸ್ಥಾಪನೆಯಾಗಿರುವುದು ಕೇಂದ್ರ ಸರ್ಕಾರದ ವಿರುದ್ಧದ ಕಾಂಗ್ರೆಸ್‌ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ ಎಂದು ರಾಹುಲ್ ಗಾಂಧಿ ಅವರ ಸಹೋದರಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ತಿಳಿಸಿದ್ದಾರೆ.

ಮಾನಹಾನಿ ಪ್ರಕರಣದಲ್ಲಿ ಸೂರತ್‌ ನ್ಯಾಯಾಲಯ ವಿಧಿಸಿದ 2 ವರ್ಷದ ಶಿಕ್ಷಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದ ಬೆನ್ನಲ್ಲೇ ಲೋಕಸಭಾ ಸಚಿವಾಲಯ ರಾಹುಲ್‌ ಗಾಂಧಿ ಸದಸ್ಯತ್ವವನ್ನು ಮರುಸ್ಥಾಪಿಸಿದೆ. ಸದಸ್ಯತ್ವ ಮರುಸ್ಥಾಪನೆಗೊಂಡ ಬೆನ್ನಲ್ಲೇ ರಾಹುಲ್‌ ಗಾಂಧಿ ಸಂಸತ್‌ ಪ್ರವೇಶಿಸಿ ಇಂದು ಎರಡನೇ ದಿನದ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

See also  ಮಂಗಳೂರು: ಸ್ವಾಮಿ ಕೊರಗಜ್ಜನ ದರ್ಶನ ಪಡೆದ ರಿಯಲ್ ಸ್ಟಾರ್ ಉಪೇಂದ್ರ, UI ಸಿನಿಮಾ ರಿಲೀಸ್‌ ಹಿನ್ನೆಲೆ ಕಟೀಲು ದೇಗುಲಕ್ಕೆ ಭೇಟಿ
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget