ಕ್ರೀಡೆದೇಶ-ವಿದೇಶರಾಜ್ಯವೈರಲ್ ನ್ಯೂಸ್

2.5 ಕೋಟಿ ನಗದು ಬಹುಮಾನವನ್ನು ಹಿಂತಿರುಗಿಸಿದ ರಾಹುಲ್ ದ್ರಾವಿಡ್‌..! ಕನ್ನಡಿಗನ ಈ ನಡೆಗೆ ಕಾರಣವೇನು..?

ನ್ಯೂಸ್ ನಾಟೌಟ್: ಟೀಂ ಇಂಡಿಯಾದ ನಿರ್ಗಮಿತ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid) ತಮ್ಮ ನಿರ್ಧಾರದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 2024ರ ಟಿ20 ವಿಶ್ವಕಪ್‌ ಟೂರ್ನಿ ಗೆದ್ದ ಹಿನ್ನೆಲೆಯಲ್ಲಿ ಬಿಸಿಸಿಐ ನೀಡಿದ ಬಹುಮಾನ (BCCI PrizeMoney) ಮೊತ್ತದಲ್ಲಿ 2.5 ಕೋಟಿ ರೂಪಾಯಿಯನ್ನು ಹಿಂದಿರುಗಿಸಿ, ಮಾದರಿಯಾಗಿದ್ದಾರೆ.

ಸಹಾಯ ಕೋಚ್‌ ಸಿಬ್ಬಂದಿಯಂತೆ (Coachig Staff) ತಾವೂ 2.5 ಕೋಟಿ ರೂ.ಗಳನ್ನು ಮಾತ್ರ ಪಡೆಯಲಿದ್ದು, ಉಳಿದ ಹಣವನ್ನು ಹಿಂತಿರುಗಿಸಿ ಸಮಾನತೆ ಮೆರೆದಿದ್ದಾರೆ. ಕನ್ನಡಿಗ ರಾಹುಲ್‌ ದ್ರಾವಿಡ್‌ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಟಿ20 ವಿಶ್ವಕಪ್‌ ಕಪ್‌ ಗೆದ್ದಬೆನ್ನಲೇ ಬಿಸಿಸಿಐ (BCCI) ಘೋಷಿಸಿದ್ದ 125 ಕೋಟಿ ರೂ. ನಗದು ಬಹುಮಾನದಲ್ಲಿ ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಥೋಡ್‌, ಫೀಲ್ಡಿಂಗ್‌ ಕೋಚ್‌ ಟಿ.ದಿಲೀಪ್‌ ಕುಮಾರ್‌ ಹಾಗೂ ಬೌಲಿಂಗ್‌ ಕೋಚ್‌ ಪಾರಸ್‌ ಮಾಂಬ್ರೆ ಸೇರಿದಂತೆ ಕೋಚಿಂಗ್‌ ಸಿಬ್ಬಂದಿಗೆ ತಲಾ 2.5 ಕೋಟಿ ರೂ. ಬಹುಮಾನ ಸಿಗಲಿದೆ. ಆದ್ರೆ ಮುಖ್ಯಕೋಚ್‌ ರಾಹುಲ್‌ ದ್ರಾವಿಡ್‌ ಅವರಿಗೆ 5 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಆದ್ರೆ ರಾಹುಲ್‌ ದ್ರಾವಿಡ್‌ 2.5 ಕೋಟಿ ರೂ. ಹೆಚ್ಚುವರಿ ಹಣವನ್ನು ಹಿಂದಿರುಗಿಸಿ, ಎಲ್ಲ ಕೋಚಿಂಗ್‌ ಸಿಬ್ಬಂದಿ ಪಡೆದಷ್ಟೇ ಹಣವನ್ನು ಪಡೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

Click 👇

https://newsnotout.com/2024/07/team-india-newly-appointed-coach-kannada-news-bcci
https://newsnotout.com/2024/07/budget-central-government-kannada-news-nda-and-modi-in-third-term
https://newsnotout.com/2024/07/urvashi-rautela-hospitalised-kannada-news-during-film-shoot-balayya

Related posts

ಕಾಸರಗೋಡಿನಿಂದ ಸುಳ್ಯಕ್ಕೆ ಕಾರಿನಲ್ಲಿ ಬಂದಿದ್ದ ಯುವಕ ನಾಪತ್ತೆ..!, ಹುಬ್ಬಳ್ಳಿ ಮೂಲದ ಈ ಯುವಕನ ಬಗ್ಗೆ ಸುಳಿವು ಸಿಕ್ಕಿದರೆ ಸಂಪರ್ಕಿಸಿ

ರಾಮಮಂದಿರಕ್ಕಾಗಿ 30 ವರ್ಷಗಳಿಂದ ಮಾತೇ ಆಡದೆ ಕುಳಿತ ಈ ಮಹಿಳೆ ಯಾರು..? ಇಲ್ಲಿದೆ ಕಠಿಣ ಮೌನ ವೃತಾಚರಣೆಯ ಹಿಂದಿನ ಕಥೆ!

ಬೈಕ್ ​ಗೆ ಕೆಎಸ್ ​ಆರ್​ಟಿಸಿ ಬಸ್​ ಡಿಕ್ಕಿ..! ಇಬ್ಬರ ದುರ್ಮರಣ, ಸುಟ್ಟು ಕರಕಲಾದ ಬಸ್