ಕರಾವಳಿಸುಳ್ಯ

ಕಡಬ: ತೆಪ್ಪ ಮಗುಚಿ ಮಹಿಳೆ ಮೃತ್ಯು,ಹುಲ್ಲು ಸಂಗ್ರಹಿಸಿ ಹೊಳೆ ದಾಟುತ್ತಿದ್ದಾಗ ದುರಂತ

200

ನ್ಯೂಸ್ ನಾಟೌಟ್ :ಕಡಬದ ಏಣಿತ್ತಡ್ಕದ ಕುಮಾರಧಾರ ಹೊಳೆಯಲ್ಲಿ ತೆಪ್ಪ ಮಗುಚಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಏಣಿತ್ತಡ್ಕ ನಿವಾಸಿ ಬಾಳಪ್ಪ ನಾಯ್ಕ ಎಂಬುವವರ ಪತ್ನಿ ಗೀತಾ (46) ಮೃತಪಟ್ಟ ಮಹಿಳೆ.ತೆಪ್ಪದಲ್ಲಿದ್ದ ಇನ್ನಿಬ್ಬರು ಮಹಿಳೆಯರು ಈಜಿ ದಡ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಏನಿದು ಘಟನೆ?


ಕುಮಾರಧಾರ ಹೊಳೆಯಲ್ಲಿ ತೆಪ್ಪದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅರೆಲ್ಲಡ್ಕ ಎಂಬಲ್ಲಿಂದ ಗೀತಾ ಹುಲ್ಲು ಸಂಗ್ರಹಿಸಿ ಹೊಳೆ ದಾಟುತ್ತಿದ್ದಾಗ ಈ ಘಟನೆ ನಡೆದಿದೆ. ನದಿಯ ಮದ್ಯ
ಭಾಗಕ್ಕೆ ಬಂದಾಗ ಜೋರಾಗಿ ಗಾಳಿ ಬೀಸಿದೆ. ಇದರಿಂದ ತೆಪ್ಪ ನಿಯಂತ್ರಣಕ್ಕೆ ಸಿಗದೆ ಮಗುಚಿ ಬಿದ್ದಿದೆ ಎನ್ನಲಾಗಿದೆ.ತೆಪ್ಪದಲ್ಲಿ ಗೀತಾ ಅವರ ಜತೆ ಇನ್ನೂ ಇಬ್ಬರು ಮಹಿಳೆಯರು ಇದ್ದರು ಎನ್ನಲಾಗಿದೆ. ಅವರು ಹುಲ್ಲು ತುಂಬಿದ್ದ ಗೋಣಿ ಚೀಲದ ಸಹಾಯದಿಂದ ಈಜಿ ದಡ ಸೇರಿದ್ದಾರೆ. ಆದರೆ, ಗೀತಾ ಈಜಲು ಬರದೇ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕಡಬ ಪೊಲೀಸರು ಪ್ರಕರಣ ದಾಖಲಿದ್ದಾರೆ.

See also  ಸುಳ್ಯ:ಹೆಸರಾಂತ ವಸ್ತ್ರಮಳಿಗೆ ಕುಂ ಕುಂ ಫ್ಯಾಶನ್‌ನಲ್ಲಿ ಬಿಗ್ ಸೇಲ್ ಸಂಭ್ರಮ..!,ಗ್ರಾಹಕರಿಗೆ ಬಂಪರ್ ಬಹುಮಾನಗಳನ್ನು ಗೆಲ್ಲುವ ಸದವಕಾಶ ..!
  Ad Widget   Ad Widget   Ad Widget   Ad Widget   Ad Widget   Ad Widget