ಕ್ರೈಂದೇಶ-ವಿದೇಶವೈರಲ್ ನ್ಯೂಸ್

ದೇವರ ಮೂರ್ತಿ ಕದ್ದು ದೇವಸ್ಥಾನಕ್ಕೆ ವಾಪಸ್ ತಂದಿಟ್ಟ ಕಳ್ಳನಿಗೆ ಆಗಿದ್ದೇನು..! ಕ್ಷಮಾಪಣಾ ಪತ್ರದಲ್ಲಿ ಬಿಚ್ಚಿಟ್ಟ ಪವಾಡಗಳೇನು..?

269

ನ್ಯೂಸ್ ನಾಟೌಟ್ : ಕಳ್ಳ ರಾಧಾ ಕೃಷ್ಣ ಮೂರ್ತಿಯನ್ನು ಕಳ್ಳತನ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಇರುವ ಪ್ರಖ್ಯಾತ ಗೌ ಘಾಟ್ ಆಶ್ರಮದಲ್ಲಿ ಇರುವ ದೇಗುಲದಿಂದ ಕಳ್ಳತನ ಮಾಡಿದ್ದ. ಅದು ಅಷ್ಟ ಧಾತುಗಳಿಂದ ನಿರ್ಮಿಸಿದ ಅಮೂಲ್ಯ ವಿಗ್ರಹ. ಇದನ್ನು ಕಳ್ಳತನ ಮಾಡಿದ್ದ ಕಳ್ಳ, ಇದೀಗ ವಿಗ್ರಹವನ್ನು ದೇಗುಲಕ್ಕೆ ವಾಪಸ್ ಮರಳಿಸಿದ್ದಾನೆ. ಜೊತೆಯಲ್ಲೇ ಕ್ಷಮಾಪಣಾ ಪತ್ರವನ್ನೂ ಬರೆದಿಟ್ಟಿದ್ದಾನೆ ಎಂದು ವರದಿ ತಿಳಿಸಿದೆ.

ಕಳ್ಳ ತನ್ನ ಕ್ಷಮಾಪಣಾ ಪತ್ರದಲ್ಲಿ ಬರೆದಿರುವಂತೆ, ಈ ಅಷ್ಟ ಧಾತು ರಾಧಾ ಕೃಷ್ಣ ವಿಗ್ರಹವನ್ನು ಕಳ್ಳತನ ಮಾಡಿದ ಬಳಿಕ ಆತನಿಗೆ ಮೇಲಿಂದ ಮೇಲೆ ಕಷ್ಟಗಳು ಬಂದವಂತೆ. ಆತನ ಪತ್ನಿ ಹಾಗೂ ಮಗ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಯಿಂದ ಬಳಲುವಂತಾಯ್ತು ಎಂದು ಕಳ್ಳ ತನ್ನ ಕ್ಷಮಾಪಣಾ ಪತ್ರದಲ್ಲಿ ವಿವರಿಸಿದ್ದಾನೆ.
ದೇಗುಲಕ್ಕೆ ಮೂರ್ತಿಯನ್ನು ಹಿಂದಿರುಗಿಸಿದ ಬಳಿಕ ಕಳ್ಳ ದೇಗುಲದ ಭಕ್ತರು ಹಾಗೂ ಅರ್ಚಕರಲ್ಲಿ ಕ್ಷಮೆ ಯಾಚಿಸಿದ್ದಾನೆ. ನನ್ನನ್ನು ಕ್ಷಮಿಸಿ, ನಾನು ದೊಡ್ಡ ತಪ್ಪು ಮಾಡಿದ್ದೇನೆ ಎಂದು ಆತ ತನ್ನ ಕ್ಷಮಾಪಣಾ ಪತ್ರದಲ್ಲಿ ಬರೆದಿದ್ದಾನೆ.

ಕಳೆದ ಮಂಗಳವಾರ ಸಂಜೆ ಹೊತ್ತಲ್ಲಿ ದೇಗುಲದ ಬಳಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ತನ್ನ ಬಳಿ ಇದ್ದ ಗೋಣಿ ಚೀಲವನ್ನು ಆತ ದೇಗುಲದ ಬಳಿ ಇಟ್ಟು ಹೋಗಿದ್ದ ಎಂದು ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರಿಗೆ ಮಾಹಿತಿ ಸಿಕ್ಕ ಕೂಡಲೇ ದೇಗುಲಕ್ಕೆ ಧಾವಿಸಿದ್ದರು. ಕಳೆದ ಸೆಪ್ಟೆಂಬರ್ 23 ರಂದು ದೇಗಲದಲ್ಲಿ ಮೂರ್ತಿ ಕಳ್ಳತನ ಆಗಿದ್ದಾಗಲೇ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇನ್ನಷ್ಟು ಕಳ್ಳತನ ಆಗದಂತೆ ಮುನ್ನೆಚ್ಚರಿಕೆ ವಹಿಸಿದ್ದ ಪೊಲೀಸರು, ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಆಗಮಿಸಿ, ದೇಗುಲದಲ್ಲಿ ಕಳ್ಳ ಬಿಟ್ಟು ಹೋಗಿದ್ದ ಗೋಣಿ ಚೀಲವನ್ನು ಪರಿಶೀಲಿಸಿದರು.

ಗೋಣಿ ಚೀಲದ ಒಳಗೆ ಕಳ್ಳ ತಾನು ಕಳ್ಳತನ ಮಾಡಿದ್ದ ರಾಧಾ ಕೃಷ್ಣರ ಅಷ್ಟ ಧಾತುಗಳ ಮೂರ್ತಿಯನ್ನು ಇರಿಸಿದ್ದ. ಅಷ್ಟೇ ಅಲ್ಲ, ತನ್ನ ಕ್ಷಮಾಪಣಾ ಪತ್ರವನ್ನೂ ಮೂರ್ತಿಯ ಜೊತೆಗೆ ಇರಿಸಿದ್ದ. ನಾನು ಪರಮ ಪಾಪ ಕೃತ್ಯವೊಂದನ್ನು ಎಸಗಿದ್ದೇನೆ. ಭಗವಾನ್ ಶ್ರೀಕೃಷ್ಣ ಹಾಗೂ ರಾಧೆಯರ ಮೂರ್ತಿ ಕಳ್ಳತನ ಮಾಡಿಬಿಟ್ಟೆ. ಇದಾದ ಬಳಿಕ ನನಗೆ ಕೆಟ್ಟ ಕನಸುಗಳು ಬರುತ್ತಿದ್ದವು. ರಾತ್ರಿ ನಿದ್ರೆ ಬರುತ್ತಿರಲಿಲ್ಲ. ಊಟ ಮಾಡಲೂ ಆಗುತ್ತಿರಲಿಲ್ಲ. ಶಾಂತಿ, ನೆಮ್ಮದಿಯೇ ಇಲ್ಲವಾಗಿತ್ತು. ಇದೇ ಹೊತ್ತಲ್ಲಿ ನನ್ನ ಹೆಂಡತಿ ಹಾಗೂ ಮಗ ಕೂಡಾ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾದರು. ನಾನು ಒಂದಿಷ್ಟು ಹಣಕ್ಕಾಗಿ ಈ ಕಳ್ಳತನ ಮಾಡಿಬಿಟ್ಟೆ ಎಂದು ಕಳ್ಳ ತಪ್ಪೊಪ್ಪಿಕೊಂಡಿದ್ದಾನೆ. ನಾನು ಕೇವಲ ಮಾರಾಟ ಮಾಡುವ ಉದ್ದೇಶದಿಂದ ಮಾತ್ರ ಈ ವಿಗ್ರಹ ಕಳ್ಳತನ ಮಾಡಿದ್ದೆ. ಆದರೆ, ನನಗೆ ಕೆಟ್ಟ ಕನಸುಗಳು ಬರುತ್ತಿವೆ. ಹೀಗಾಗಿ, ವಿಗ್ರಹ ವಾಪಸ್ ಮಾಡುತ್ತಿದ್ದೇನೆ ಎಂದು ಕಳ್ಳ ತನ್ನ ಕ್ಷಮಾಪಣಾ ಪತ್ರದಲ್ಲಿ ತಿಳಿಸಿದ್ದಾನೆ.

See also  ಶಾಲೆಯೊಂದರಲ್ಲಿ 7ನೇ ತರಗತಿಗೆ ನಟಿ ತಮನ್ನಾ ಭಾಟಿಯಾ ಬಗ್ಗೆ ಪಠ್ಯ..! ಮಕ್ಕಳು ಹೆಚ್ಚಿನ ಅಧ್ಯಯನಕ್ಕಾಗಿ ಇಂಟರ್ ನೆಟ್ ನಲ್ಲಿ ಹುಡುಕಿದರೆ ಗತಿಯೇನು ಎಂದು ಪೋಷಕರ ಆಕ್ರೋಶ..!

Click

https://newsnotout.com/2024/10/mobile-adiction-kannada-news-mother-and-son-viral-cctv-video/
https://newsnotout.com/2024/10/father-love-on-son-and-bike-got-burned-kannada-news-viral-news/
https://newsnotout.com/2024/10/bandage-kannada-news-doctor-nomore-delhi-viral-news-minor/
https://newsnotout.com/2024/10/prof-bhagavan-and-chamundeshwari-kannada-news-kalladka-prbhakar-bhat/
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget