Latestಕ್ರೈಂದೇಶ-ವಿದೇಶಸಿನಿಮಾ

ರೇಸಿಂಗ್‌ ವೇಳೆ ಮತ್ತೆ ಅಪಘಾತಕ್ಕೀಡಾದ ಸ್ಟಾರ್ ನಟನ ಕಾರು..! ಇಲ್ಲಿದೆ ವಿಡಿಯೋ

459
Spread the love

ನ್ಯೂಸ್ ನಾಟೌಟ್: ಕಾಲಿವುಡ್‌ ಸ್ಟಾರ್‌ ಅಜಿತ್‌ ಕುಮಾರ್‌ ರೇಸಿಂಗ್‌ ಕಾರು ಮತ್ತೆ ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ. ಪೋರ್ಷೆ ಸ್ಪ್ರಿಂಟ್ ಚಾಲೆಂಜ್‌ನಲ್ಲಿ ಭಾಗವಹಿಸಿರುವ ಅಜಿತ್‌ ಅವರಿದ್ದ ಕಾರು ಎರಡು ಬಾರಿ ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ.

ಸ್ಪೇನ್‌ ನ ವೇಲೆನ್ಸಿಯಾದಲ್ಲಿ ನಡೆದ ರೇಸಿಂಗ್‌ನಲ್ಲಿ ಮೊದಲ ಬಾರಿ ತನ್ನ ಕಾರು ಅಪಘಾತವಾದಾಗ ಅವರು ನಿಯಂತ್ರಣಕ್ಕೆ ತಂದು ರೇಸ್‌ ಮುಂದುವರೆಸಿದ್ದಾರೆ. ಎರಡನೇ ಬಾರಿ ಮತ್ತೆ ಕಾರು ಅಪಘಾತಕ್ಕೀಡಾಗಿದ್ದು, ಕಾರು ಟ್ರ್ಯಾಕ್‌ ನಲ್ಲೇ ಪಲ್ಟಿಯಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

5ನೇ ಸುತ್ತು ಅಜಿತ್‌ ಕುಮಾರ್‌ಗೆ ಉತ್ತಮವಾಗಿತ್ತು. ಎಲ್ಲರ ಮೆಚ್ಚುಗೆ ಗಳಿಸಿ 14ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇತರ ಕಾರುಗಳಿಂದಾಗಿ 2 ಬಾರಿ ಅಪಘಾತಕ್ಕೀಡಾಗಿದೆ. “ಅವರಿಗೆ ಯಾವುದೇ ಹಾನಿಯಾಗಿಲ್ಲ. ಎಲ್ಲರ ಪ್ರಾರ್ಥನೆಗಳು ಮತ್ತು ಶುಭಾಶಯಗಳಿಗೆ ಧನ್ಯವಾದಗಳು ಎಂದು ಅಜಿತ್‌ ಅವರ ಮ್ಯಾನೇಜರ್‌ ಸುರೇಶ್ ಚಂದ್ರ” ಹೇಳಿದ್ದಾರೆ.

See also  ಸುಳ್ಯ: ಮಂಡೆಕೋಲಿನಲ್ಲಿ ನೇಣುಬಿಗಿದು ಯುವಕ ಆತ್ಮಹತ್ಯೆ
  Ad Widget   Ad Widget   Ad Widget   Ad Widget