ನ್ಯೂಸ್ ನಾಟೌಟ್: ಕುರಾನ್(Quran)ಗೆ ಅಗೌರವ ತೋರಿದ್ದಾರೆಂದು ಪ್ರವಾಸಿಗರೊಬ್ಬರ ಮೇಲೆ ಸುಳ್ಳು ಆರೋಪ ಹೊರಿಸಿ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ ಎನ್ನಲಾಗಿದೆ.
ಗುಂಪೊಂದು ಆ ವ್ಯಕ್ತಿ ಮೇಲೆ ಹಲ್ಲೆ ನಡೆಸಿತ್ತು. ವರದಿಗಳ ಪ್ರಕಾರ, ಆ ವ್ಯಕ್ತಿ ಮೇಲೆ ಕೋಪಗೊಂಡ ಜನರು ಕರೆದುಕೊಂಡು ಹೋಗಿ ಚಿತ್ರಹಿಂಸೆ ನೀಡಿ, ಅಂತಿಮವಾಗಿ ಸಜೀವದಹನ ಮಾಡಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಆ ಗುಂಪಿನಲ್ಲಿ ಹಂತಕರು ಕೂಡ ಇದ್ದರು, ಹಗಲಿನಲ್ಲಿಯೇ ಅಮಾಯಕರೊಬ್ಬರ ಹತ್ಯೆ ಜನರಲ್ಲಿ ಭಯವನ್ನು ಹುಟ್ಟುಹಾಕಿದೆ.
ಪಾಕಿಸ್ತಾನದಲ್ಲಿ ಧರ್ಮನಿಂದನೆಯ ಕಾನೂನು ವಿಶ್ವದ ಅತ್ಯಂತ ಕಠಿಣ ಕಾನೂನುಗಳಲ್ಲಿ ಒಂದು. ಇವುಗಳನ್ನು ಅಲ್ಪಸಂಖ್ಯಾತರು, ರಾಜಕೀಯ ವಿರೋಧಿಗಳು ಅಥವಾ ವಿದೇಶಿಯರ ವಿರುದ್ಧ ಹೆಚ್ಚಾಗಿ ಬಳಸುತ್ತಾರೆ. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಮತ್ತು ವಿದೇಶಿ ಸರ್ಕಾರಗಳು ಈ ದಾಳಿಯನ್ನು ಖಂಡಿಸಿವೆ.
A tourist was falsely accused of disrespecting the Quran in Pakistan.
He was then kidnapped, tortured, and burned alive by a mob of THOUSANDS of Pakistani Muslim men, as if it were completely normal.
Do you really want these people in your country? pic.twitter.com/lSTUxenrWy
— Dr. Maalouf (@realMaalouf) May 26, 2025
ಪಾಕಿಸ್ತಾನದಲ್ಲಿ ಇಂತಹದ್ದೇ ಘಟನೆ 2 ವರ್ಷಗಳ ಹಿಂದೆಯೂ ನಡೆದಿತ್ತು. ಕುರಾನ್ ಗೆ ಬೆಂಕಿ ಹೆಚ್ಚಿದ್ದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.