ಕರಾವಳಿ

ನಾಯಿ ನುಂಗಿ ಒದ್ದಾಡುತ್ತಿದ್ದ ಬೃಹತ್ ಹೆಬ್ಬಾವಿನ ರಕ್ಷಣೆ, 15 ಅಡಿ ಉದ್ದ, 60 ಕೆ.ಜಿ. ತೂಕವಿದ್ದ ಹೆಬ್ಬಾವು ನಾಯಿ ನುಂಗಿ ಒದ್ದಾಡಿದ್ದು ಹೇಗೆ?

ನ್ಯೂಸ್ ನಾಟೌಟ್: ನಾಯಿಯೊಂದನ್ನು ನುಂಗಿ ಒದ್ದಾಡುತ್ತಿದ್ದ ಬೃಹತ್ ಹೆಬ್ಬಾವನ್ನು ರಕ್ಷಣೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್‌ಪುರ ತಾಲೂಕಿನ ಹಂತುವಾನಿ ಗ್ರಾಮದಲ್ಲಿ ನಾಯಿಯನ್ನು 15 ಅಡಿ ಉದ್ದ, 60 ಕೆ.ಜಿ. ತೂಕವಿದ್ದ ಹೆಬ್ಬಾವು ನುಂಗಿತ್ತು. ಬಳಿಕ ಸಂಚರಿಸಲು ಸಾಧ್ಯವಾಗದೆ ಒದ್ದಾಟ ನಡೆಸುತ್ತಿತ್ತು.

ಇದನ್ನು ಗಮನಿಸಿದ ಸ್ಥಳೀಯರು ಉರಗ ತಜ್ಞ ಹರೀಂದ್ರರಿಗೆ ಕರೆ ಮಾಡುತ್ತಾರೆ. ತಕ್ಷಣ ಅವರು ಸ್ಥಳಕ್ಕೆ ಆಗಮಿಸಿ ಹೆಬ್ಬಾವಿನ ರಕ್ಷಣೆಯನ್ನು ಮಾಡುತ್ತಾರೆ. ಅರಣ್ಯ ಅಧಿಕಾರಿ ರಾಘವೇಂದ್ರ ಸಮ್ಮುಖದಲ್ಲಿ ಹೆಬ್ಬಾವು ರಕ್ಷಣಾ ಕಾರ್ಯ ನಡೆದಿದೆ. ಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗಿದೆ.

Related posts

ಕಡಬ: ಮತಯಂತ್ರದಲ್ಲಿ ದೋಷ! ಕೆಲಕಾಲ ಮತದಾನ ಸ್ಥಗಿತ!

ಕರ್ನಾಟಕದ ಪೊಲೀಸ್‌ ಅಧಿಕಾರಿಗಳನ್ನು ಕೇರಳ ಪೊಲೀಸರು ವಶಕ್ಕೆ ಪಡೆದದ್ದೇಕೆ? ಆರೋಪಿಗಳನ್ನು ಬಂಧಿಸಲು ಕೇರಳಕ್ಕೆ ತೆರಳಿದ್ದ ಕರ್ನಾಟಕ ಪೊಲೀಸರು ಮಾಡಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಸುಳ್ಯ: ಚಲಿಸುತ್ತಿದ್ದ ಓಮಿನಿ ಕಾರು ಪಲ್ಟಿ, ಚಾಲಕನಿಗೆ ಗಾಯ