ಕರಾವಳಿ

ಪುತ್ತೂರು:ಸ್ನಾನ ಮಾಡಲೆಂದು ಹೊಳೆಗಿಳಿದ ಯುವಕ,ನೀರಲ್ಲಿಯೇ ಹೃದಯಾಘಾತಗೊಂಡು ಇನ್ನಿಲ್ಲ..!

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ದುರಂತ ಅಂತ್ಯಕ್ಕೊಳಗಾದವರ ಸಂಖ್ಯೆ ವಿಪರೀತ ಹೆಚ್ಚಾಗುತ್ತಿದೆ.ಈ ಕ್ಷಣ ಕಣ್ಮುಂದೆ ಇದ್ದ ವ್ಯಕ್ತಿ ಮರುಕ್ಷಣ ಏನಾಗಬಹುದು ಅನ್ನೋದನ್ನು ಊಹಿಸಲು ಸಾಧ್ಯವಿಲ್ಲ.ಇಂತಹ ಹೃದಯವಿದ್ರಾವಕ ಘಟನೆಯೊಂದು ಪುತ್ತೂರಿನಿಂದ ವರದಿಯಾಗಿದೆ.ಸ್ನಾನಕ್ಕೆಂದು ಬಂದಿದ್ದ ಯುವಕ ಹೃದಯಘಾತಗೊಂಡು ಶಾಶ್ವತವಾಗಿ ಬಾರದ ಲೋಕಕ್ಕೆ ತೆರಳಿದ ಘಟನೆ ವರದಿಯಾಗಿದೆ.

ಪುತ್ತೂರಿನ ಇರ್ದೆ ಬೆಂದ್ರ ತೀರ್ಥದ ಬಳಿ ಹೊಳೆಯಲ್ಲಿ ಈ ದುರಂತ ನಡೆದಿದೆ.ಬೊಳುವಾರಿನ ಗ್ಯಾರೇಜೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಜಿತ್(27.ವ) ಎಂಬ ಯುವಕ ಸ್ಥಳೀಯ ನೆಂಟರೊಬ್ಬರ ಮನೆಗೆ ಬಂದಿದ್ದ.ಈ ವೇಳೆ ಸ್ನಾನಕ್ಕೆಂದು ಹೊಳೆಗೆ ಇಳಿದಿದ್ದಾಗ ಹೃದಯಘಾತವಾಗಿದೆ.ನೀರಿನಲ್ಲಿ ತೇಲುತ್ತಿದ್ದ ಯುವಕನನ್ನು ತಕ್ಷಣ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ಕರೆತರಲಾಯಿತಾದರೂ ಅದಗಾಲೇ ಆತ ಉಸಿರು ಚೆಲ್ಲಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

Related posts

ನೆಟ್ಟ ಗಿಡಗಳನ್ನು ಬೆಳೆಸಿ ಪರಿಸರ ಉಳಿಸಿ: ಹಿರಿಯ ಸಿವಿಲ್ ನ್ಯಾಯಾಧೀಶ ಬಿ. ಮೋಹನ್‌

ಉಡುಪಿ:ತನ್ನ ಜಾಗಕ್ಕೆ ದನಗಳು ಪ್ರವೇಶ ಮಾಡುತ್ತವೆಯೆಂದು ಗುಂಡಿಟ್ಟು ಕೊಂದ ಕಟುಕ,4 ಗೋವುಗಳ ಹತ್ಯೆ,15 ದನಗಳು ಗಂಭೀರ;ದನಗಳ ಕೊಂದ ಕಿರಾತಕ ಯಾರು?

ನೆಲ್ಯಾಡಿ: ಕೆಎಸ್‌ಆರ್‌ಟಿಸಿ ಬಸ್ಸ್ ಮತ್ತು ಟೆಂಪೋ ಟ್ರಾವೆಲರ್ ಡಿಕ್ಕಿ,ಪ್ರಯಾಣಿಕನ ಕೈಗೆ ಗಾಯ