ಕರಾವಳಿಪುತ್ತೂರು

ಪುತ್ತೂರು ಮೂಲದ ಯುವತಿ ಬೆಂಗಳೂರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ

300


ನ್ಯೂಸ್ ನಾಟೌಟ್ :ಯುವತಿಯೊಬ್ಬಳು ಬೆಂಗಳೂರಿನಲ್ಲಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಈಕೆ ಪುತ್ತೂರು ಮೂಲದ ಕೆಯ್ಯೂರು ಗ್ರಾಮದ ಮಾಡಾವು ಸ್ಥಾನತ್ತಾರು ಚಂದ್ರಶೇಖರ ರೈ ಮತ್ತು ಸೋಮಾವತಿ ರೈ ದಂಪತಿಯ ಪುತ್ರಿ ಶ್ರುತಿ ಸಿ.ರೈ (22) ಎಂದು ಗುರುತಿಸಲಾಗಿದೆ.

ಕಳೆದೆರಡು ವರುಷಗಳಿಂದ ಶ್ರುತಿ ಬೆಂಗಳೂರಿನಲ್ಲಿ ಆನಿಮೇಷನ್ ಕೋರ್ಸ್ ಮಾಡುತ್ತಿದ್ದಳು. ಈ ಹಿನ್ನಲೆ ಆಕೆ ಅಲ್ಲೇ ಬಾಡಿಗೆ ರೂಂನಲ್ಲಿದ್ದಳು.ಇದೀಗ ಕೋರ್ಸ್ ಮುಗಿದಿದ್ದು, ಕೆಲಸದ ಹುಡುಕಾಟವನ್ನು ಶುರು ಮಾಡಿದ್ದಳೆಂದು ತಿಳಿದು ಬಂದಿದೆ.

ಬಾಡಿಗೆ ರೂಂ ನಲ್ಲಿ ಕೆಲ ದಿನಗಳ ಹಿಂದೆ ಈಕೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು.ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಎ.30 ರಂದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೇ.1 ರಂದು ಮೃತದೇಹವನ್ನು ಊರಿಗೆ ತಂದು ಅಂತ್ಯಸಂಸ್ಕಾರ ನೆರವೇರಿಸಿರುವುದಾಗಿ ತಿಳಿದು ಬಂದಿದೆ.

See also  ಉಪ್ಪಿನಂಗಡಿ: ತಡರಾತ್ರಿ ಎಟಿಎಂನಿಂದ ಕಳವಿಗೆ ಯತ್ನ,ಮುಖಗವಸು, ಕೈಗೆ ಗ್ಲೌಸ್‌ ಧರಿಸಿ ಬಂದಿದ್ದ ಕಳ್ಳರು..ಮುಂದೇನಾಯ್ತು?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget