ಕರಾವಳಿಪುತ್ತೂರುಸುಳ್ಯ

ಪುತ್ತೂರು:ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಯಕ್ಷಗಾನ ಬಯಲಾಟ,ಯಕ್ಷಗಾನ ಅಭಿಮಾನಿಗಳ ಮನಸೆಳೆಯಲಿದೆ ‘ಧರ್ಮ ಸಿಂಹಾಸನ’

314

ನ್ಯೂಸ್ ನಾಟೌಟ್ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ) ಪುತ್ತೂರು ಘಟಕದ ಆರನೇಯ ವಾರ್ಷಿಕೋತ್ಸವದ ಪ್ರಯುಕ್ತ ಯಕ್ಷಗಾನ ಬಯಲಾಟ ನಡೆಯಲಿದೆ.ಏಪ್ರಿಲ್ ೧೯ರಂದು ಸಂಜೆ ಗಂಟೆ 6ರಿಂದ ರಾತ್ರಿ ಗಂಟೆ 12 ಗಂಟೆ ತನಕ ಈ ಯಕ್ಷಗಾನ ಇರಲಿದೆ.

ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಾಂಸ್ಕೃತಿಕ ವೇದಿಕೆಯಲ್ಲಿ ಶ್ರೀ ಪಟ್ಲ ಸತೀಶ್ ಶೆಟ್ರ ನೇತೃತ್ವದಲ್ಲಿ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಜನಪ್ರಿಯ ಪ್ರಸಂಗ ಧರ್ಮ ಸಿಂಹಾಸನ(ಪೌರಾಣಿಕ ಪಣ್ಯ ಕಥಾನಕ)ಯಕ್ಷಗಾನ ಇರಲಿದೆ.ಭಾಗವತರಾಗಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಹಾಗೂ ಶ್ರೀ ಪ್ರಪುಲ್ಲಚಂದ್ರ ನೆಲ್ಯಾಡಿ ಇರಲಿದ್ದಾರೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ)ಪುತ್ತೂರು ಘಟಕ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ)ಮಂಗಳೂರು ಇದರ ಅಧ್ಯಕ್ಷರು,ಸರ್ವ ಸದಸ್ಯರು ತಿಳಿಸಿದ್ದಾರೆ.

See also  ಮಹಿಳೆಯೊಂದಿಗೆ ಅಶ್ಲೀಲ ಫೋಟೋ ವೈರಲ್,ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ ಶಾಸಕ ಮಠಂದೂರು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget