ಕರಾವಳಿಕಾಸರಗೋಡುಪುತ್ತೂರುಸುಳ್ಯ

ಪುತ್ತೂರಿಗೆ ಆಶಾ ತಿಮ್ಮಪ್ಪ ಕೊನೆಯ ಕ್ಷಣದಲ್ಲಿ ನಡೆಯಬಹುದೇ ಟಿಕೇಟ್ ಹೈಡ್ರಾಮಾ?

ನ್ಯೂಸ್ ನಾಟೌಟ್ : ಕರ್ನಾಟಕ ವಿಧಾನಸಭಾ ಚುನಾವಣೆಯ ಕಾವು ಗಗನಕ್ಕೇರಿದೆ. ಪುತ್ತೂರು , ಸುಳ್ಯದಿಂದ ಯಾರಿಗೆ ಟಿಕೇಟ್ ಸಿಗಬಹುದು ಅನ್ನುವ ಕುತೂಹಲ ಗರಿಗೆದರಿದೆ. ಬಿಜೆಪಿ ಬಲ್ಲ ಮೂಲಗಳ ಪ್ರಕಾರ ಪುತ್ತೂರಿನಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಸುಳ್ಯ ಕ್ಷೇತ್ರದ ಗೌಡ ಸಮುದಾಯದ ಆಶಾ ತಿಮ್ಮಪ್ಪ ಅವರಿಗೆ ಬಿಜೆಪಿಯಿಂದ ಟಿಕೇಟ್ ಸಿಗುವುದು ಖಚಿತ ಎನ್ನಲಾಗುತ್ತಿದೆ. ಪುತ್ತೂರಿನ ಬಿಜೆಪಿ ಅಭ್ಯರ್ಥಿಗಳ ಆಕಾಂಕ್ಷಿಗಳ ಪಟ್ಟಿಯಲ್ಲಿ ಹರೀಶ್ ಕಂಜಿಪಿಲಿ, ಯತೀಶ್ ಆರ್ವಾರ್ ಸಹಿತ ಹಲವು ಮಂದಿ ನಾಯಕರ ಹೆಸರಿದೆ. ಆದರೆ ಅಂತಿಮವಾಗಿ ಈ ಅದೃಷ್ಟ ಯಾರಿಗೆ ಒಲಿಯಲಿದೆ ಅನ್ನುವುದು ತೀವ್ರ ಕುತೂಹಲ ಕೆರಳಿಸಿದೆ. ಸುಳ್ಯದಿಂದ ಭಾಗೀರಥಿ ಮುರುಳ್ಯಗೆ ಟಿಕೇಟ್ ಖಚಿತ ಅನ್ನುವ ಮಾಹಿತಿಯೂ ಇದೆ. ಸುಳ್ಯಕ್ಕೆ ಅಂಗಾರರಿಗೂ ಮತ್ತೆ ಅವಕಾಶ ಇದೆ ಅನ್ನುವ ವಾದವೂ ಇದೆ. ಆದರೆ ಅಂಗಾರರ ಬಗ್ಗೆ ಹೈಕಮಾಂಡ್ ಗೆ ಅಷ್ಟೊಂದು ಒಲವು ಇದೆ ಅನ್ನುವ ಮಾತುಗಳು ಕೇಳಿ ಬರುತ್ತಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುವುದರಲ್ಲಿ ತಲ್ಲೀನವಾಗಿವೆ. ಅಂತಹ ಕುತೂಹಲಕಾರಿ ಹೆಸರುಗಳಲ್ಲಿ ಕರಾವಳಿಯೂ ಕೂಡ ಒಂದು ಅನ್ನುವುದು ವಿಶೇಷ. ಈ ಸಲ ಹೊಸ ಮುಖಗಳು ಕಾಣಿಸಿಕೊಂಡರೂ ಅಚ್ಚರಿ ಇಲ್ಲ ಎಂದು ತಿಳಿದು ಬಂದಿದೆ. ಹಿಂದುತ್ವದ ಹಿನ್ನೆಲೆಯುಳ್ಳ ನಾಯಕರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಸುಳ್ಯ, ಪುತ್ತೂರು, ಕಾಪು, ಬೈಂದೂರು, ಭಟ್ಕಳದಲ್ಲಿ ಹೊಸಬರು ಕಣಕ್ಕೆ ಇಳಿಯಬಹುದು.

Related posts

ನಾಳೆ ದುಬೈನಲ್ಲಿ ನರ್ತಿಸಲಿರುವ ‘ಶಿವದೂತೆ ಗುಳಿಗೆ’!

ಸುಳ್ಯ : ಶಾಸಕಿ ಕು. ಭಾಗೀರಥಿ ಮುರುಳ್ಯರಿಗೆ ತಾಲೂಕು ಆಡಳಿತ ಮತ್ತು ನೌಕರರ ಸಂಘದಿಂದ ಗೌರವಾರ್ಪಣೆ

ಬಿಜೆಪಿ ಸೇರಿದಕ್ಕೆ ಪಾದ್ರಿಯನ್ನು ವಜಾಗೊಳಿಸಿತಾ ಚರ್ಚ್? ಈ ಬಗ್ಗೆ ಚರ್ಚ್ ಹೇಳಿದ್ದೇನು?