ಕರಾವಳಿಪುತ್ತೂರು

ಪುತ್ತೂರು: ಪೊಲೀಸ್ ಸಿಬ್ಬಂದಿ ಮೇಲೆಯೇ ಜಲ್ಲಿಕಲ್ಲಿನಿಂದ ಹೊಡೆದು ಗಾಯಗೊಳಿಸಿದ ವ್ಯಕ್ತಿ..!ಆರೋಪಿ ಬಂಧನ

ನ್ಯೂಸ್ ನಾಟೌಟ್ : ಜಲ್ಲಿಕಲ್ಲಿನಿಂದ ಪೊಲೀಸ್‌ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದ ಘಟನೆ ಪುತ್ತೂರಿನಿಂದ ವರದಿಯಾಗಿದೆ. ಬಡಗನ್ನೂರು ಮುಂಡೋಲೆ ನಿವಾಸಿ ಹರೀಶ್‌ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಪುತ್ತೂರು ಸಂಚಾರ ಠಾಣೆಯ ಸಿಬಂದಿ ಶಿವಪ್ರಸಾದ್‌ ಹಲ್ಲೆಗೊಳಗಾದ ಪೊಲೀಸ್‌ ಸಿಬ್ಬಂದಿ ಎನ್ನಲಾಗಿದೆ.ಆರೋಪಿ ಅಮಲು ಪದಾರ್ಥದ ನಶೆಯಲ್ಲಿ ಈ ಕೃತ್ಯವೆಸಗಿದ್ದಾನೆಂದು ತಿಳಿದು ಬಂದಿದೆ.ಘಟನೆ ನಡೆದು ಕೆಲ ಹೊತ್ತಿನಲ್ಲಿಯೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ನ.16ರಂದು ಸಂಜೆ ಸಾರ್ವಜನಿಕ ದೂರು ಕೇಳಿ ಬಂದಿತ್ತು.ಈ ವೇಳೆ ಪೊಲೀಸದ್ ಸಿಬ್ಬಂದಿ ಶಿವಪ್ರಸಾದ್‌ ಅವರು ಹೊಯ್ಸಳ ವಾಹನದಲ್ಲಿ ಬಂದು ಮಿನಿ ವಿಧಾನಸೌಧದ ಬಳಿ ಇಬ್ಬರು ಮಕ್ಕಳೊಂದಿಗೆ ನಿಂತಿದ್ದ ಮಹಿಳೆಯೋರ್ವರನ್ನು ವಿಚಾರಿಸುತ್ತಿದ್ದರು.ಈ ಸಂದರ್ಭ ಆಕೆಯ ಗಂಡ ಹಾಗೂ ಆರೋಪಿ ಹರೀಶ್‌ ಅಲ್ಲಿಗೆ ಬಂದು ಜಲ್ಲಿ ಕಲ್ಲಿನಿಂದ ಹೊಡೆದು ಗಾಯಗೊಳಿಸಿರುವುದಾಗಿ ಆರೋಪಿಸಲಾಗಿದೆ.ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಶಿವಪ್ರಸಾದ್‌ ಅವರು ನೀಡಿದ್ದ ದೂರಿನ ಮೇರೆಗೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ನಗರ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Related posts

ಗಂಡನ ಕಣ್ಣಿಗೆ ಮಣ್ಣೆರಚಿ ಪತ್ನಿ ಪರಾರಿ..!

ಬರೋಬ್ಬರಿ ಏಳು ವರ್ಷಗಳ ನಂತರ ‘ಚೆಲುವಿನ ಚಿತ್ತಾರ’ ಬೆಡಗಿ ಕಮ್ ಬ್ಯಾಕ್..! ತುಳುನಾಡಿನ ಜನಪ್ರಿಯ ಕಂಬಳದ ಸುತ್ತ ಕೇಂದ್ರೀಕೃತವಾದ ಕಥೆ ‘ಕರಾವಳಿ’ಯಲ್ಲಿ ಅಮೂಲ್ಯ..!

ರೇಣುಕಾಸ್ವಾಮಿ ಕೊಲೆ ಕೇಸ್‌ ತನಿಖೆ ಮುಕ್ತಾಯ..! ಇಂದೇ(ಸೆ.4) ಕೋರ್ಟ್ ಗೆ ಚಾರ್ಜ್‌ಶೀಟ್‌ ಸಲ್ಲಿಕೆ..!