ಕರಾವಳಿಪುತ್ತೂರು

‘ಗಡಿಪಾರು ಆಗಲಿರುವ ಯುವಕರ ಮೇಲೆ ಕೇಸು ಹಾಕಿದ್ದೇ ಬಿಜೆಪಿ ಸರಕಾರ, ಈಗ ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ’ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಾಗ್ದಾಳಿ

209

ನ್ಯೂಸ್ ನಾಟೌಟ್: ಮತೀಯ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪುತ್ತೂರಿನ ಕೆಲವು ಯುವಕರ ಮೇಲೆ ಗಡಿಪಾರು ನೋಟಿಸ್ ಜಾರಿಯಾಗಿದೆ. ಬಿಜೆಪಿ ಸರಕಾರವೇ ಈ ಯುವಕರ ಮೇಲೆ ಕೇಸು ಮಾಡಿಸಿದ್ದು ಈಗ ಬಿಜೆಪಿಯವರು ಯುವಕರ ಪರ ಪ್ರತಿಭಟನೆಯ ನಾಟಕವಾಡುತ್ತಿದ್ದು ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದ್ದಾರೆ.

ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಈ ವಿಚಾರದಲ್ಲಿ ಬಿಜೆಪಿ ನಾಯಕರು ಆತ್ಮ ವಿಮರ್ಶೆ ಮಾಡಿಕೊಳ್ಳುವುದು ಉತ್ತಮ. ಯುವಕರನ್ನು ಬಳಕೆ ಮಾಡಿ ಅವರ ಮೇಲೆ ಕೇಸು ಹಾಕಿಸಿ ಅವರನ್ನು ಗಡಿಪಾರುಮಾಡುವಂತೆ ಮಾಡಿ ಆ ಬಳಿಕ ಅವರ ಪರ ಪ್ರತಿಭಟನೆಯ ನಾಟಕವಾಡುವುದು ಇವರ ಕೆಲಸವಾಗಿದೆ. ಇವರ ಸರಕಾರ ಇರುವಾಗಲೇ ಯುವಕರ ಮೇಲೆ ಕೇಸು ಹಾಕಿಸಿದ್ದಾರೆ. ಬಿಜೆಪಿಯವರೇ ಕೇಸ್ ಹಿಂಪಡಿಸಬೇಕಿತ್ತು. ಇವರ ಲಾಭಕ್ಕಾಗಿ ಯುವಕರ ಮೇಲೆ ಕೇಸು ಹಾಕಿಸಿದ್ದಾರಲ್ಲ ಯುವಕರು ಆಲೋಚನೆ ಮಾಡಬೇಕು. ಈಗ ಕಾಂಗ್ರೆಸ್ ಸರಕಾರ ಗಡಿಪಾರು ಮಾಡಿದ್ದಾರೆ ಎಂದು ಬಿಜೆಪಿಯವರು ಪ್ರತಿಭಟನೆ ಮಾಡಲು ಮುಂದಾಗಿರುವುದು ಹೇಸಿಗೆಯ ವಿಚಾರವಾಗಿದೆ. ಯುವಕರನ್ನು ಅವರ ಲಾಭಕ್ಕಾಗಿ ಬಳಕೆ ಮಾಡಿ ಅವರಿಗೆ ದಿಕ್ಕು ದೆಸೆಯಿಲ್ಲದೆ ಮಾಡಿದ್ದಾರೆ. ಗಡಿಪಾರಾದ ಯುವಕರು ಕೃತ್ಯದಲ್ಲಿ ಭಾಗಿಯಾಗಿದ್ದಾರಾ ಎಂಬುದನ್ನು ಇಲಾಖೆ ಕೂಲಂಕುಷವಾಗಿ ತನಿಖೆ ಮಾಡುತ್ತದೆ. ಈ ಬಗ್ಗೆ ನಾನು ಇಲಾಖೆಗೆ ಸೂಚನೆಯನ್ನು ನೀಡಿದ್ದೇನೆ. ಬಿಜೆಪಿಯವರು ನಾಟಕ ಮಾಡುವುದನ್ನು ಮೊದಲು ನಿಲ್ಲಿಸಬೇಕು ಮತ್ತು ಯುವಕರನ್ನು ಕೆಟ್ಟ ಕೆಲಸಗಳಿಗೆ ಬಳಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

See also  ಸುಳ್ಯ: ಕಾಲೇಜ್‌ಗೆ ಹೋಗಲು ಒಪ್ಪದ ಮನಸ್ಸು ,ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget