ಕ್ರೈಂ

ಪುತ್ತೂರು: ಶಾಸಕ ಮಠಂದೂರು ಬಸ್ ತಡೆದು ಹಿಂದೂ ಕಾರ್ಯಕರ್ತರ ಆಕ್ರೋಶ

ಪುತ್ತೂರು: ಗುಂಡ್ಯ ಬಳಿ ಅನ್ಯಕೋಮಿನ ಯುವಕ -ಯುವತಿ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಸ್ಲಿಂ ಯುವಕನಿಗೆ ಹಲ್ಲೆ ನಡೆಸಿದ ಯುವಕರನ್ನು ಬಂಧಿಸಲಾಗಿದ್ದು ಅವರನ್ನು ಬಿಡುಗಡೆಗೊಳಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಈ ಕೆಲಸವನ್ನು ಪುತ್ತೂರು ಶಾಸಕರು ಸರಿಯಾಗಿ ನಿಭಾಯಿಸಿಲ್ಲ ಎನ್ನುವ ಅಸಮಾನದಿಂದ ಆಕ್ರೋಶಗೊಂಡ ಹಿಂದೂ ಸಂಘಟನೆ ಕಾರ್ಯಕರ್ತರು ಪುತ್ತೂರು ಶಾಸಕರು ತೆರಳುತ್ತಿದ್ದ ಬಸ್ ತಡೆದು ಆಕ್ರೋಶ ಹೊರ ಹಾಕಿದ್ದಾರೆ.

ಶಾಸಕರನ್ನು  ಕಾರ್ಯಕರ್ತರು ಸಂಪರ್ಕಿಸಿದಾಗ ನಾನು ಬೆಂಗಳೂರಿನಲ್ಲಿ ಇದ್ದೇನೆ ಎಂದು ಮಾಹಿತಿ ನೀಡಿದ್ದರು ಎನ್ನಲಾಗಿದೆ. ಆದರೆ ತಡರಾತ್ರಿ ವೇಳೆ ಶಾಸಕರು ಗುಪ್ತವಾಗಿ ಬಸ್ಸಿನಲ್ಲಿ ಬೆಂಗಳೂರಿಗೆ ಪ್ರಯಾಣಿಸಲು ಯತ್ನಿಸಿದಾರೆ ಎಂಬ ಮಾಹಿತಿ ಸಂಘಟನೆ ಕಾರ್ಯಕರ್ತರಿಗೆ ಸಿಕ್ಕಿದೆ. ತಕ್ಷಣವೇ ಉಪ್ಪಿನಂಗಡಿಯ ಹೊಟೇಲ್ ಬಳಿ ಬಸ್ಸು ತಡೆದು ಶಾಸಕರನ್ನು ಸಂಘಟನೆಯ ಕಾರ್ಯಕರ್ತರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಯುವಕ ನೀಡಿದ ದೂರಿನ ಮೇರೆಗೆ ಕೆಲ ಹಿಂದೂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ  ಯುವಕರನ್ನು  ಬಿಡುಬಿಡುಗಡೆಗೊಳಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ನಿಂತಿದ್ದ ಆಟೋದಿಂದ ಹಣ ಲಪಟಾಯಿಸುವುದೇ ವೃತ್ತಿ..!

ಮೊಬೈಲ್‌ ಕೊಡಿಸುವಂತೆ ಹಠ ಹಿಡಿದ ಮಗ, ಕೋಪದಲ್ಲಿ ಮಗನ ಉಸಿರು ನಿಲ್ಲಿಸಿದ ಪಾಪಿ ತಂದೆ..!

Free Bus ಮೇಲೆ ‘ಶಕ್ತಿ’ ತೋರಿದ್ದ ಮಹಿಳೆಗೆ 5 ಸಾವಿರ ದಂಡ! ಅಷ್ಟಕ್ಕೂ ಚಲಿಸುತ್ತಿದ್ದ ಸರ್ಕಾರಿ ಬಸ್ ಗೆ ಕಲ್ಲೆಸೆದಿದ್ದೇಕೆ?