ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿರುವ ಕಂಬಳ ಗದ್ದೆಯ ಕೆರೆಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.
ಅಗ್ನಿಶಾಮಕ ಪೊಲೀಸರು ಕೆರೆ ಪರಿಶೀಲನೆ ನಡೆಸಿದಾಗ ಇಂಟರ್ ನೆಟ್ ಕೇಬಲ್ ಸಂಸ್ಥೆಯ ಮನೋಹರ್ ಪ್ರಭು ಅವರ ಮೃತ ದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಪುತ್ತೂರು ಅಗ್ನಿಶಾಮಕದಳದ ರುಕ್ಮಯ ಗೌಡರವರ ನೇತೃತ್ವದಲ್ಲಿ ಕೃಷ್ಣ ಜಾಲಿಬೇರ, ತೌಸಿಪ್ ಯಾನೆ ಮುಲ್ಲಾ ಅವರು ಗರುಡಪಾತಾಳದ ಮೂಲಕ ಪತ್ತೆ ಮಾಡಿ ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತಿದ್ದಾರೆ.