ಕರಾವಳಿಪುತ್ತೂರು

ಪುತ್ತೂರು: ಚಡ್ಡಿ ಗ್ಯಾಂಗ್ ಹಾಗೂ ತಲವಾರಿನ ಕಟ್ಟು ಕಥೆ ಕಟ್ಟಿದ ಮಹಿಳೆ, ಈಕೆಯ ಕಥೆಗೆ ಸ್ಥಳಕ್ಕೆ ಬಂದು ಸರಿಯಾಗಿಯೇ ನಿರ್ದೇಶನ ಮಾಡಿದ ಪೊಲೀಸರು..!

190

ನ್ಯೂಸ್ ನಾಟೌಟ್: ಕಳೆದ ಕೆಲವು ಸಮಯಗಳಿಂದ ಚಡ್ಡಿ ಗ್ಯಾಂಗ್ ಬಗ್ಗೆ ತುಳುನಾಡಿನಲ್ಲಿ ಭಾರೀ ಚರ್ಚೆ ಆಗುತ್ತಿದೆ. ಈ ಚಡ್ಡಿ ಗ್ಯಾಂಗ್ ವಿಚಾರವನ್ನು ಜನ ಮರೆತು ಸಹಜ ಜೀವನಕ್ಕೆ ಬರುವಷ್ಟರಲ್ಲಿ ಪುತ್ತೂರಿನ ಕೆಯ್ಯೂರಿನಲ್ಲಿ ಮಹಿಳೆಯೊಬ್ಬಳು ಚಡ್ಡಿ ಗ್ಯಾಂಗ್ ನವರು ತಲವಾರು ತೋರಿಸಿ ಹಣ, ಚಿನ್ನಕ್ಕಾಗಿ ಬೆದರಿಸಿದ್ದಾರೆ ಅನ್ನುವ ಫೋಟೋವನ್ನು ಹರಿಯಬಿಟ್ಟಿದ್ದಾಳೆ. ಇದು ವೈರಲ್ ಆಗುತ್ತಲೇ ಜನ ಬೆಚ್ಚಿ ಬಿದ್ದಿದ್ದಾರೆ.

ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಇದು ಕಟ್ಟು ಕಥೆ ಎಂದು ತಿಳಿದು ಬಂದಿದೆ. ಈಕೆ ಎರಡು ವರ್ಷದ ಹಿಂದೆ ಕೇರಳದಲ್ಲಿ ನಡೆದಿದ್ದ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದು ಶೇರ್ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಚಡ್ಡಿ ಗ್ಯಾಂಗ್ ಇಲ್ಲ, ಯಾರೂ ಇಂತಹ ಫೇಕ್ ಸುದ್ದಿಗಳಿಗೆ ತಲೆ‌ಕೊಡಬೇಡಿ ಎಂದು ಪೊಲೀಸ್ ಇಲಾಖೆ ಸ್ಪಷ್ಟ ನೆ ನೀಡಿದೆ.

See also  ಮಡಿಕೇರಿ:'ಜೀವನದಾರಿ' ವೃದ್ಧಾಶ್ರಕ್ಕೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕ ಮಂತರ್‌ ಗೌಡ,ಸಮಾಜ ಸೇವಕ ರಮೇಶ್ ಮತ್ತು ರೂಪ ದಂಪತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget