Latestಸಿನಿಮಾ

ಕಿಚ್ಚ ಸುದೀಪ್ ‘ಬಿಲ್ಲ ರಂಗ ಬಾಷಾ’ ಚಿತ್ರಕ್ಕೆ ಟೈಟ್ ಸೆಕ್ಯೂರಿಟಿ ! ಸ್ಪೆಷಲ್ ವಿಡಿಯೋ ಹಂಚಿಕೊಂಡ ಪುತ್ತೂರಿನ ನಿರ್ದೇಶಕ!!ವಿಡಿಯೋ ವೀಕ್ಷಿಸಿ

575

ನ್ಯೂಸ್‌ ನಾಟೌಟ್: ಸದ್ಯ ಕಿಚ್ಚ ಸುದೀಪ್ ಅವರು ‘ಬಿಲ್ಲ ರಂಗ ಬಾಷಾ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.ಏ.16ರಿಂದ ಈ ಚಿತ್ರದ ಶೂಟಿಂಗ್ ನಡೆಯುತ್ತಿದ್ದು,ಈ ಬಗ್ಗೆ ಸುದೀಪ್ ಅವರೇ ಮಾಹಿತಿ ತಿಳಿಸಿದ್ದರು.ಆದರೆ ಹಿಂದೆಂದೂ ಇರದ ಟೈಟ್ ಸೆಕ್ಯೂರಿಟಿಯೊಂದಿಗೆ ಸಿನಿಮಾವನ್ನು ಸುದೀಪ್ ಅವರು ಮಾಡ್ತಿದ್ದಾರಂತೆ. ಚಿತ್ರದ ತಯಾರಿ ಹೇಗಿದೆ ಎಂಬುದನ್ನು ಈ ಚಿತ್ರದ ಡೈರೆಕ್ಟರ್ ಹಾಗೂ ಮೂಲತಃ ಪುತ್ತೂರಿನವರಾದ ಅನೂಪ್ ಭಂಡಾರಿ ಅವರು ಅಪ್‌ಡೇಟ್ ಹಂಚಿಕೊಂಡಿದ್ದಾರೆ

ಈ ಚಿತ್ರದ ಶೂಟಿಂಗ್ ಅದೆಷ್ಟು ವ್ಯವಸ್ಥಿತವಾಗಿ ನಡೆಯುತ್ತಿದೆ ಎಂಬುದರ ಬಗ್ಗೆ ಇವರು ಹಂಚಿಕೊಂಡ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ. ಜತೆಗೆ ಪ್ರತಿಯೊಬ್ಬ ಸಿಬ್ಬಂದಿಗೂ ಇಲ್ಲಿ ಐಡಿ ಕಾರ್ಡ್ ಇದೆ. ಅದನ್ನ ಚೆಕ್ ಮಾಡೋಕೆ ಸೆಕ್ಯೂರಿಟಿಗಳೂ ಇದ್ದಾರೆ. ಹಾಗೆಲ್ಲಾ ಸುಮ್ಮನೆ ಚಿತ್ರದ ಸೆಟ್ ಒಳಗೆ ಹೋಗೋದಕ್ಕೆ ಸಾಧ್ಯವಿಲ್ಲ ಎಂಬುದು ಅನೂಪ್ ಹಂಚಿಕೊಂಡ ವಿಡಿಯೋ ಮೂಲಕ ಸ್ಪಷ್ಟವಾಗಿದೆ.

ಇನ್ನು ಚಿತ್ರದಲ್ಲಿ ಸುದೀಪ್ ಹೇಗೆ ಕಾಣಲಿದ್ದಾರೆ ಎಂಬ ಸುಳಿವು ವಿಡಿಯೋದಲ್ಲಿ ಬಿಟ್ಟು ಕೊಟ್ಟಿಲ್ಲವಾದರೂ ಚಿತ್ರದ ಸೆಟ್‌ಗೆ ಕೂಲಿಂಗ್ ಗ್ಲ್ಯಾಸ್ ಧರಿಸಿ ಸುದೀಪ್ ಸ್ಟೈಲೀಶ್ ಎಂಟ್ರಿ ಕೊಟ್ಟಿದ್ದಾರೆ ಅನ್ನೋದು ಗೊತ್ತಾಗುತ್ತೆ. ಟೈಟ್ ಸೆಕ್ಯೂರಿಟಿಯೊಂದಿಗೆ ಚಿತ್ರದ ಶೂಟಿಂಗ್ ಮಾಡಲಾಗ್ತಿದೆ. ಇಡೀ ಶೂಟಿಂಗ್ ಸ್ಪಾಟ್ ಕವರ್ ಮಾಡಲಾಗಿದೆ. ಸದ್ಯ ಈ ಝಲಕ್ ನೋಡಿ ಕಿಚ್ಚ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಸಿನಿಮಾಗಾಗಿ ಕಿಚ್ಚನ ಫ್ಯಾನ್ಸ್ ಎದುರು ನೋಡ್ತಿದ್ದಾರೆ.ಅಂದ ಹಾಗೆ ವಿಕ್ರಾಂತ್ ರೋಣ’ ಚಿತ್ರದ ಬಳಿಕ ಮತ್ತೊಮ್ಮೆ ಅನೂಪ್ ಭಂಡಾರಿ ಜೊತೆ ಸುದೀಪ್ ಕೈಜೋಡಿಸಿದ್ದಾರೆ. ‘ಬಿಲ್ಲ ರಂಗ ಬಾಷಾ’ ಸಿನಿಮಾ ಮೂಲಕ ವಿಭಿನ್ನ ಕಥೆ ಹೇಳಲು ಸುದೀಪ್ ಸಜ್ಜಾಗಿದ್ದಾರೆ.

 

 

View this post on Instagram

 

A post shared by Anup Bhandari (@anupsbhandari)

 

See also  ದರ್ಶನ್ ಆ್ಯಂಡ್ ಟೀಮ್ ನಿಂದ ನಿರಂತರ ರೌಡಿಗಳ ಸಂಪರ್ಕ..! ಹಲವು ದಂಧೆಗಳಲ್ಲಿ ದಾಸನಿಗೆ ರೌಡಿಗಳಿಂದ ಸಹಾಯ..?
  Ad Widget   Ad Widget     Ad Widget   Ad Widget   Ad Widget   Ad Widget