ಕರಾವಳಿಪುತ್ತೂರು

ಪುತ್ತೂರು:ಕಾರು-ಸ್ಕೂಟಿ ಮಧ್ಯೆ ಭೀಕರ ಅಪಘಾತ,ಸ್ಕೂಟಿ ಸವಾರ ದುರಂತ ಅಂತ್ಯ

ನ್ಯೂಸ್ ನಾಟೌಟ್ : ಕಾರು ಹಾಗೂ ಸ್ಕೂಟಿ ನಡುವೆ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಪುತ್ತೂರಿನ ಕಲ್ಲರ್ಪೆಯಲ್ಲಿ ಮುಂಜಾನೆ ಸುಮಾರು 7 ಗಂಟೆ ಸಮಯಕ್ಕೆ ಸಂಭವಿಸಿದೆ.ಸ್ಕೂಟಿ ಸವಾರ ನೈತಾಡಿಯ ಇಸ್ಮಾಯಿಲ್ ಮೃತ ದುರ್ದೈವಿ.

ಇಸ್ಮಾಯಿಲ್ ಅವರು ಬೆಳಗ್ಗಿನ ವೇಳೆ ಕಲ್ಲರ್ಪೆಯಲ್ಲಿರುವ ತಮ್ಮ ಜಮೀನಿಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ.ಈ ವೇಳೆ ಇವರಿದ್ದ ಸ್ಕೂಟಿಗೆ ಎದುರು ಭಾಗದಿಂದ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಅಪಘಾತದ ರಭಸಕ್ಕೆ ಸ್ಕೂಟರ್‌ ನಜ್ಜುಗುಜ್ಜಾಗಿದ್ದು,ಈ ಸಂದರ್ಭ ಗಂಭೀರ ಗಾಯಗೊಂಡಿದ್ದ ಗಾಯಾಳುವನ್ನು ಕೂಡಲೇ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು.ಆ ವೇಳೆಗಾಗಲೇ ಅವರು ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆಂದು ವರದಿಯಾಗಿದೆ.

ಅಪಘಾತಕ್ಕೊಳಗಾದ ಕಾರು ಮಡಿಕೇರಿ ನೋಂದಾವಣಿಯದ್ದು ಎನ್ನಲಾಗಿದೆ.ಮೃತ ಇಸ್ಮಾಯಿಲ್ ಅವರು ಪತ್ನಿ, ಮೂವರು ಹೆಣ್ಣು ಮಕ್ಕಳು ಮತ್ತು ಓರ್ವ ಮಗನನ್ನು ಅಗಲಿದ್ದಾರೆ.

Related posts

ಸುಳ್ಯ : ಸ್ವಾತಂತ್ರ್ಯ ದಿನದ ಅಂಗವಾಗಿ ನಡೆದ ಸ್ಪರ್ಧೆಯಲ್ಲಿ NMPUC ವಿದ್ಯಾರ್ಥಿಗಳು ಪ್ರಥಮ, ಕಾಲೇಜು ವತಿಯಿಂದ ವಿದ್ಯಾರ್ಥಿಗಳಿಗೆ ಅಭಿನಂದನೆ

ಕಾರ್ಕಳ: ರಾತ್ರಿ ಬಹುಮಹಡಿ ಕಟ್ಟಡದೊಳಗೆ ಗ್ಯಾಸ್ ಸಿಲಿಂಡರ್ ಸ್ಫೋಟ..! ಮನೆಯ ಮೇಲ್ಭಾಗಕ್ಕೆ ಓಡಿ ಸಹಾಯಕ್ಕಾಗಿ ರಸ್ತೆಯಲ್ಲಿ ಹೋಗುವವರನ್ನು ಕರೆದ ಮನೆಯವರು..!

ಸಂಪಾಜೆ, ಗೂನಡ್ಕದಲ್ಲಿ ತಂಪೆರೆದ ಮಳೆರಾಯ, ಬಿಸಿಲ ಬೇಗೆಗೆ ಬಳಲಿ ಬೆಂಡಾಗಿದ್ದ ಜನರಿಗೆ ತುಸು ಸಮಾಧಾನ