ಕರಾವಳಿ

ಅಶೋಕ್ ಕುಮಾರ್ ರೈ ಹಿಂದಿಕ್ಕುತವತ್ತ ಸಾಗಿದ ಪುತ್ತಿಲ, ಮಕಾಡೆ ಮಲಗುತ್ತಿರುವ ಬಿಜೆಪಿ..!

329

ನ್ಯೂಸ್ ನಾಟೌಟ್ : ಪುತ್ತೂರು ವಿಧಾನ ಸಭಾ ಕ್ಷೇತ್ರ ಕುತೂಹಲದತ್ತ ಸಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಮುನ್ನಡೆಯಲ್ಲಿದ್ದರೆ ಬಿಜೆಪಿಗೆ ಸೆಡ್ಡು ಹೊಡೆದು ನಿಂತಿರುವ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಎರಡನೇ ಸ್ಥಾನದಲ್ಲಿ ಬಿಗುವಿನ ಫೈಟ್ ನೀಡುತ್ತಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಮೂರನೇ ಸ್ಥಾನದತ್ತ ಕುಸಿಯುವ ಮೂಲಕ ಪುತ್ತೂರಿನಲ್ಲಿ ಬಿಜೆಪಿ ಮಕಾಡೆ ಮಲಗುತ್ತಿದೆ.

ಅಶೋಕ್ ಕುಮಾರ್ ರೈ ಯವರು 24592 ಮತಗಳ ಮುನ್ನಡೆ ಪಡೆದುಕೊಂಡಿದ್ದರೆ ಪುತ್ತಿಲ ಅವರು 23102 ಮತಗಳನ್ನು ಪಡೆದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ 15350 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಆರನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್ 1490 ಮತಗಳ ಮುನ್ನಡೆಯಲ್ಲಿದೆ. ಅರುಣ್ ಪುತ್ತಿಲ-ಅಶೋಕ್ ರೈ ನಡುವೆ ಬಿಗ್ ಫೈಟ್ ಏರ್ಪಟ್ಟಿದ್ದು ಯಾವುದೇ ಸಂದರ್ಭದಲ್ಲಿ ಪುತ್ತೂರಿನ ಫಲಿತಾಂಶ ಬುಡಮೇಲಾಗುವ ಸಾಧ್ಯತೆ ಇದೆ. ಈಗಿನ ಪ್ರಕಾರ ವರದಿ ಪ್ರಕಾರ ಅರುಣ್ ಪುತ್ತಿಲ ಕಾಂಗ್ರೆಸ್ ಅಭ್ಯರ್ಥಿಗಿಂತ 94 ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

See also  ಪುತ್ತೂರು: ಡಾಂಬರ್‌ನಲ್ಲಿ ಸಿಲುಕಿದ ನಾಗರಹಾವನ್ನು ರಕ್ಷಿಸಿದ ಉರಗ ಪ್ರೇಮಿ ಯಾರು? ಎರಡು ದಿನಗಳ ಪ್ರಯತ್ನ ಕೊನೆಗೂ ಫಲ ಕೊಡ್ತಾ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget