ಕರಾವಳಿಕೊಡಗುರಾಜಕೀಯಸುಳ್ಯ

ಪುತ್ತೂರು: ನನ್ನ ಕ್ಷೇತ್ರದಲ್ಲಿ ಅನ್ಯಾಯ ಆದವರಿಗೆ ನ್ಯಾಯ ಕೊಡಿಸುವ ಶಕ್ತಿ ನನಗಿದೆ,ಬೆಳ್ತಂಗಡಿ ಶಾಸಕರು ಇಲ್ಲಿಗೆ ಬಂದು ಮಾತನಾಡುವ ಅಗತ್ಯವಿಲ್ಲ-ಶಾಸಕ ಅಶೋಕ್ ರೈ

334

ನ್ಯೂಸ್ ನಾಟೌಟ್ : ಪುತ್ತೂರಿನಲ್ಲಿ ಬಿಜೆಪಿ ಮುಖಂಡರ ವಿರುದ್ಧ ಬ್ಯಾನರ್ ಗಲಾಟೆ ಇಡೀ ರಾಜ್ಯದಲ್ಲೇ ಸಂಚಲನ ಮಾಡಿದೆ.ಪೊಲೀಸರಿಂದ ಹಲ್ಲೆಗೊಳಗಾದ ಹಿಂದೂ ಕಾರ್ಯಕರ್ತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಅವರ ಯೋಗ ಕ್ಷೇಮ ವಿಚಾರಿಸಲು ಬಿಜೆಪಿ ಪ್ರಮುಖರು,ಹಿಂದೂ ಮುಖಂಡರು ಆಸ್ಪತ್ರೆಗೆ ಭೇಟಿ ಕೊಡುತ್ತಿದ್ದಾರೆ.

ಆಸ್ಪತ್ರೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಕೂಡ ಬಂದಿದ್ದರು. ಈ ಬಗ್ಗೆ ಮಾತನಾಡಿರುವ ಪುತ್ತೂರು ಶಾಸಕ ಪುತ್ತೂರಿಗೆ ಬೆಳ್ತಂಗಡಿ ಶಾಸಕರು ಇಲ್ಲಿಗೆ ಬಂದು ಮಾತನಾಡುವ ಅಗತ್ಯವಿಲ್ಲ.ನನ್ನ ಕ್ಷೇತ್ರದಲ್ಲಿ ಅನ್ಯಾಯ ಆದವರಿಗೆ ನ್ಯಾಯ ಕೊಡಿಸುವ ಶಕ್ತಿ ನನಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಮಾಡಿದ ತಪ್ಪನ್ನು ಇನ್ನೊಬ್ಬರ ತಲೆಗೆ ಕಟ್ಟುವ ಕೆಲಸ ಬಿಟ್ಟುಬಿಡಿ ಎಂದು ಬಿಜೆಪಿ ಯವರಿಗೆ ರೈ ಅವರು ಇನ್ನೆರಡು ದಿನದಲ್ಲಿ ಅಮಾನವೀಯ ಹಲ್ಲೆ ನಡೆಸಲು ಪೋಲೀಸರಿಗೆ ಒತ್ತಡ ಹಾಕಿದವರ ಹೆಸರು ಬಹಿರಂಗ ಪಡಿಸುವೆ ಎಂದು ಹೇಳಿದ್ದಾರೆ.ದೌರ್ಜನ್ಯಕ್ಕೆ ಪುತ್ತೂರು ತಾಲೂಕಿನಲ್ಲಿ ಅವಕಾಶ ನೀಡುವುದಿಲ್ಲ ಎಂದು ತಮ್ಮ ಸ್ಪಷ್ಟ ನಿಲುವನ್ನು ತೋರಿದ್ದಾರೆ.ಈ ಬಗ್ಗೆ ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

See also  ಸುಳ್ಯ: ಸ್ಕೂಟಿ-ಗೂಡ್ಸ್ ರಿಕ್ಷಾ ನಡುವೆ ಅಪಘಾತ, ಸವಾರನಿಗೆ ಗಾಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget