ಕರಾವಳಿಪುತ್ತೂರು

ನಿಮ್ಮ ಮಕ್ಕಳು ಕೋರ್ಟ್, ಕೇಸ್ ನಲ್ಲಿ ಅಲೆದಾಡದಂತೆ ನೋಡಿಕೊಳ್ಳಿ, ಪೋಷಕರಿಗೆ ಕಿವಿ ಮಾತು ಹೇಳಿದ ಶಾಸಕ ಅಶೋಕ್ ರೈ

ನ್ಯೂಸ್ ನಾಟೌಟ್ : ಕೆಲವರು ತಮ್ಮ ರಾಜಕೀಯ ಲಾಭಕೋಸ್ಕರ ಕಂಡವರ ಮನೆ ಮಕ್ಕಳನ್ನು ಬಲಿಪಶುಗಳನ್ನಾಡಿ ಮಾಡುವವರಿದ್ದು ನಿಮ್ಮ ಮಕ್ಕಳನ್ನು ಕೆಟ್ಟ ಚಟುವಟಿಕೆಯಲ್ಲಿ ಭಾಗಿಗಳಾಗುವಂತೆ ಮಾಡಿ ಜೀವನ ಪೂರ್ತಿ ಕೋರ್ಟ್, ಕೇಸ್ ಅಂತ ಅಲೆದಾಡುವಂತೆ ಮಾಡುತ್ತಾರೆ. ಅಂತಹವರ ಬಗ್ಗೆ ಎಚ್ಚರಿಕೆಯಿಂದ ಇದ್ದು ನಿಮ್ಮ ಮಕ್ಕಳನ್ನು ನೀವು ರಕ್ಷಿಸಿಕೊಳ್ಳಬೇಕಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಬೊಳ್ಳಮೆ ಆಂಜನೇಯ ಭಜನಾಮಂದಿರದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅಶೋಕ್ ರೈ, “ರಾಜಕೀಯದವರು ತಮ್ಮ ಲಾಭಕ್ಕೆ ಏನು ಬೇಕಾದರೂ ಭಾಷಣ ಮಾಡಬಹುದು, ಅವರ ಭಾಷಣ ಕೇಳಿ ಯುವ ಸಮೂಹ ಹಾಳಾಗದಂತೆ ಎಚ್ಚರವಹಿಸಬೇಕು. ನೀವು ಒಂದು ಬಾರಿ ಕೇಸು ಮೈಮೇಲೆ ಹಾಕಿಕೊಂಡರೆ ಮತ್ತೆ ಜೀವನ ಪೂರ್ತಿ ಕೋರ್ಟಿಗೆ ಅಲೆದಾಡಬೇಕಾಗುತ್ತದೆ. ಸಮಾಜದಲ್ಲಿ ಎಲ್ಲರೊಂದಿಗೂ ಅನ್ಯೋನ್ಯತೆಯಿಂದ ಬಾಳಿ ಬದುಕುವ ಮೂಲಕ ಜೀವನ ರೂಪಿಸಿಕೊಳ್ಳಿ, ನೀವು ಜೀವನದಲ್ಲಿ ಸೋತಾಗ ನಿಮ್ಮ ಜೊತೆ ಯಾರೂ ಇರುವುದಿಲ್ಲ. ಕೊನೆಯವರೆಗೂ ನಿಮ್ಮ ಜೊತೆ ಇರುವುದು ನಿಮ್ಮ ತಂದೆ ತಾಯಿ, ಅವರ ಕಣ್ಣಲ್ಲಿ ನೀರು ಭರಿಸುವ ಕೆಲಸವನ್ನು ಯಾರೂ ಮಾಡಬರದು ಎಂದು ಹೇಳಿದರು.

ಭಾರತದಲ್ಲಿ ಎಲ್ಲಾ ಜಾತಿ, ಧರ್ಮದ ಜನರಿದ್ದಾರೆ, ದೇಶದಲ್ಲಿರುವ ಎಲ್ಲಾ ಧರ್ಮದ ಜನರೂ ಪರಸ್ಪರ ಅಣ್ಣ ತಮ್ಮಂದಿರಂತೆ ಬಾಳಿದರೆ ಮಾತ್ರ ದೇಶ ಅಭಿವೃದ್ದಿಯಾಗಲು ಸಾಧ್ಯ. ಜ.೨೨ ರಂದು ಶ್ರೀರಾಮಮಂದಿರ ಲೋಕಾರ್ಪಣೆಯಾಗಿದೆ. ದೇಶದಲ್ಲಿ ಅದಾಗ್ತದೆ, ಇದಾಗ್ತದೆ ಎಂದು ಆತಂಕದ ಮಾತುಗಳನ್ನು ಕೆಲವರು ಹೇಳಿದ್ದರು. ಆದರೆ ರಾಮಮಂದಿರ ಲೋಕಾರ್ಪಣೆ ದಿನ ದೇಶದಲ್ಲಿ ಎಲ್ಲೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ , ಅಹಿತಕರ ಘಟನೆ ನಡೆಯುವುದು ಯಾರಿಗೂ ಬೇಕಾಗಿಲ್ಲ, ಜನ ಪ್ರತೀ ದಿನವೂ ನೆಮ್ಮದಿಯನ್ನು ಬಯಸುತ್ತಾರೆ ಎಂದು ಶಾಸಕರು ತಿಳಿಸಿದರು.

Related posts

ಉಪ್ಪಿನಂಗಡಿ:ಟ್ಯಾಂಕರ್ ಚಾಲಕನಿಗೆ ಹಿಗ್ಗಾ ಮುಗ್ಗಾ ಥಳಿಸಿ ಪರ್ಸ್ ನಲ್ಲಿದ್ದ ನಗದು ಎಗರಿಸಿದ ದರೋಡೆಕೋರರು!

ಬಿಗ್‌ ಬಾಸ್‌ ಸೀಸನ್ 11ರ ಸ್ಪರ್ಧಿ ಕರಾವಳಿಯ ಬೆಡಗಿ ಮೋಕ್ಷಿತಾ ಪೈಗೆ ಮದುವೆ ?ಅಭಿಮಾನಿಗಳು ಶಾಕ್..

ಕಲ್ಲಡ್ಕ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು! ಕಾರಣ ನಿಗೂಢ!