ಕರಾವಳಿ

ಪುತ್ತೂರು: ತಡರಾತ್ರಿ ಕಲ್ಲೇಗ ಟೈಗರ್ಸ್ ಹುಲಿ ಕುಣಿತ ತಂಡದ ನಾಯಕನ ಕೊಚ್ಚಿ ಕೊಲೆ..! ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು

ನ್ಯೂಸ್ ನಾಟೌಟ್:  ತಡರಾತ್ರಿ (ನವೆಂಬರ್ 7) ಪುತ್ತೂರಿನಲ್ಲಿ ಯುವಕನೊಬ್ಬನ ಬರ್ಬರ ಹತ್ಯೆ ನಡೆದಿದೆ. ಪುತ್ತೂರಿನಲ್ಲಿ ‘ಕಲ್ಲೇಗ ಟೈಗರ್ಸ್’ ಎಂಬ ಹುಲಿ ಕುಣಿತ ಖ್ಯಾತಿಯ ತಂಡವನ್ನು ಕಟ್ಟಿದ 24 ವರ್ಷದ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳ ತಲವಾರು ಏಟಿಗೆ ಬಲಿಯಾದವರನ್ನು ಅಕ್ಷಯ್  ಕಲ್ಲೇಗ (24 ವರ್ಷ) ಎಂದು ಗುರುತಿಸಲಾಗಿದೆ.

ಅಕ್ಷಯ್ ಕಲ್ಲೇಗ ಪುತ್ತೂರಿನ ವಿವೇಕಾನಂದ ಕಾಲೇಜಿನ ಬಳಿಯ ನಿವಾಸಿಯಾಗಿದ್ದಾರೆ. ಚಂದ್ರಶೇಖರ-  ಕುಸುಮ ದಂಪತಿಯ ಪುತ್ರರಾಗಿದ್ದಾರೆ. ಮೃತರು ಇಬ್ಬರು ಸಹೋದರರನ್ನು ಅಗಲಿದ್ದಾರೆ ಎಂದು ತಿಳಿದು ಬಂದಿದೆ.

6 ವರ್ಷಗಳ ಹಿಂದೆ ಅಕ್ಷಯ್ ಅವರು ಕಲ್ಲೇಗ ಟೈಗರ್ಸ್ ಎಂಬ ಹುಲಿ ವೇಷ ತಂಡವನ್ನು  ಕಟ್ಟಿದ್ದರು ಹುಲಿ ವೇಷ ತಂಡ ಇತ್ತೀಚಿನ ಕೆಲವು  ದಿನಗಳಲ್ಲಿ ಪುತ್ತೂರಿನಲ್ಲಿ ಭಾರಿ ಖ್ಯಾತಿ ಪಡೆದುಕೊಂಡಿತ್ತು. ಯಶಸ್ಸಿನ  ಹಂತದಲ್ಲಿದ್ದಾಗಲೇ ಯುವಕನ ಕೊಲೆ ನಡೆದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಮಾಣಿ ಮೈಸೂರು ಹೆದ್ದಾರಿಯ ನೆಹರು ನಗರ ಜಂಕ್ಷನ್ ನಲ್ಲಿ ಅಟ್ಟಾಡಿಸಿ ಕೊಲೆ ಮಾಡಲಾಗಿದೆ. ಹತ್ಯೆಗೈದ ಬನ್ನೂರು ನಿವಾಸಿ ಮನೀಷ್, ಚೇತು ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಮತ್ತೋರ್ವ ಆರೋಪಿ ತಲೆಮಲೆಸಿಕೊಂಡಿರೋ ಮಾಹಿತಿ ದೊರೆತಿದೆ.

ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತ ವಿಚಾರದಲ್ಲಿ ಗಲಾಟೆ. ಈ ಸಂದರ್ಭ ಎರಡು ಸಾವಿರ ನೀಡುವ ವಿಚಾರದಲ್ಲಿ ಮಾತುಕತೆ ವಿಕೋಪಕ್ಕೆ ತಿರುಗಿದೆ ಎಂದು ಹೇಳಲಾಗುತ್ತಿದೆ.  ಬಸ್ ಚಾಲಕ ಚೇತು ಎಂಬಾತನ ಬೆಂಬಲಿಗನಿಗೆ ಹಾಗೂ ಅಕ್ಷಯ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಕೊನೆಗೆ ಅಕ್ಷಯ್ ನನ್ನ ಅಟ್ಟಾಡಿಸಿ ತಲವಾರಿನಿಂದ ಮೂರಕ್ಕೂ ಅಧಿಕ ಮಂದಿಯ ತಂಡದಿಂದ ದಾಳಿ ನಡೆಸಿದ್ದಾರೆ. ಹತ್ಯೆಗೆ ಬೇರೆ ಕಾರಣಗಳು ಇದೆಯಾ ಎಂಬ ಬಗ್ಗೆ ಪೊಲೀಸರ ತನಿಖೆ ನಡೆಯುತ್ತಿದೆ.

https://www.youtube.com/watch?v=09utl2U70mY&t=19s

Related posts

11 ವರ್ಷದ ಬಳಿಕ ಸೌಜನ್ಯ ರೇಪ್‌-ಮರ್ಡರ್‌ ಕೇಸ್‌ಗೆ ರೋಚಕ ಟ್ವಿಸ್ಟ್, ಸಂತೋಷ್ ರಾವ್ ನಿರಪರಾಧಿಯಾದ್ರೆ ಸೌಜನ್ಯಳನ್ನು ಕೊಂದವರು ಯಾರು? ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದೇನು?

ಪುತ್ತೂರಿನಿಂದ ಉದ್ಯಮಿ ಅಶೋಕ್ ಕುಮಾರ್ ರೈಗೆ ಕಾಂಗ್ರೆಸ್‌ ಟಿಕೆಟ್‌?

ಪುತ್ತೂರು:ಕಾರು- ಸ್ಕೂಟಿ ಭೀಕರ ಅಪಘಾತ; ಸವಾರ ಗಂಭೀರ