ಪುತ್ತೂರು

ಪುತ್ತೂರು ಬಿಲ್ಲವ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ, ಶಾಲಾ ಮಕ್ಕಳಿಗೆ ಪುಸ್ತಕ, ಯುನಿಫಾರ್ಮ್ ವಿತರಣೆ

247

ನ್ಯೂಸ್ ನಾಟೌಟ್ : ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘ (ರಿ) ಪುತ್ತೂರು. ಬಿಲ್ಲವ ಗ್ರಾಮ ಸಮಿತಿ ಕೆದಂಬಾಡಿ ವತಿಯಿಂದ ,ಪ್ರತಿಭಾ ಪುರಸ್ಕಾರ,ಪುಸ್ತಕ ವಿತರಣೆ ಕಾರ್ಯಕ್ರಮ ಕೆದಂಬಾಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ರಾದ ಬಾಳಪ್ಪ ಪೂಜಾರಿ ಬಾಲಯರವರ ಅಧ್ಯಕ್ಷತೆಯಲ್ಲಿ ಕೋಚಣ್ಣ ಪೂಜಾರಿಯವರ ಅದಿತಿ ನಿವಾಸ ಎಂಡೆಸಾಗುವಿನಲ್ಲಿ ಜೂನ್ ೧೧ ರಂದು ನಡೆಯಿತು.
ಬಿಲ್ಲವ ಗ್ರಾಮ ಸಮಿತಿ ಮುಖoಡರು ಹಾಗೂ ಮಾಜಿ ಕುಂಬ್ರ ವಲಯ ಸಂಚಾಲಕರಾದ ಕೋಚಣ್ಣ ಪೂಜಾರಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ.ವಿದ್ಯಾರ್ಥಿಗಳು ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಆದರ್ಶಗಳನ್ನು ಬೆಳೆಸುತ್ತಾ ಸತ್ಯ,ಧರ್ಮ,ನ್ಯಾಯ,ನೀತಿಯಿಂದ ಬದುಕಬೇಕು.ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆಯಿಂದ ಬಲಯುತರಾಗಿ ಎಂಬ ಸಂದೇಶವನ್ನು ಪಾಲಿಸಬೇಕು. ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ ಗಳನ್ನು ಮೈಗೂಡಿಸಿಕೊಂಡು ಅದರ್ಶಪ್ರಾಯರಾಗಿ ಬದುಕಬೇಕು,ತಂದೆ ತಾಯಿಯ ವರನ್ನು ಗೌರವದಿಂದ ಕಾಣಬೇಕು ಎಂದು ಹೇಳಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ 24 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ಪುತ್ತೂರು ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಹಾಗು ಬಿಲ್ಲವ ಸಂಘದ ಉಪಾಧ್ಯಕ್ಷ ರಾದ ಚಂದ್ರಕಲಾ ಮುಕ್ವೆಯವರು ಕಾರ್ಯಕ್ರಮ ಉದ್ಘಾಟಿಸಿದರು.ಪುತ್ತೂರು ತಾಲೂಕು ಬಿಲ್ಲವ ಸಂಘದ ಜತೆ ಕಾರ್ಯದರ್ಶಿ ಚಿದಾನಂದ ಸುವರ್ಣ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಕೆದಂಬಾಡಿ ಬಿಲ್ಲವ ಮಹಿಳಾವೇದಿಕೆ ಅಧ್ಯಕ್ಷರಾದ ಪುಷ್ಪಾ ಬೋಲೋಡಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯುವವಾಹಿನಿ ಕೇಂದ್ರ ಸಮಿತಿ ಕ್ರೀಡಾ ನಿರ್ದೇಶಕರು ಹಾಗೂ ಪುತ್ತೂರು ತಾಲೂಕು ಯುವವಾಹಿನಿ ಅಧ್ಯಕ್ಷರಾದ ಬಾಬು ಇದ್ಪಾಡಿ. ಯುವವಾಹಿನಿ ಮಾಜಿ ಅಧ್ಯಕ್ಷರಾದ ನಾರಾಯಣ ಪೂಜಾರಿ ಕುರಿಕ್ಕಾರ, ನಾರಾಯಣ ಪೂಜಾರಿ ನಂಜೆ, ಸತೀಶ್ ಯಚ್ ಕೆ. ಸುರೇಶ್ ಸುಶ ತಿಂಗಳಾಡಿ, ಗಂಗಾಧರ ಬಾಲಯ,ಮಂಜುನಾಥ ಇದ್ಪಾಡಿ,ಪುತ್ತೂರು ತಾಲೂಕು ಮಹಿಳಾವೇದಿಕೆ ಕೋಶಾಧಿಕಾರಿ ಹಾಗೂ ಆರಿಯಡ್ಕ ಮಹಿಳಾವೇದಿಕೆ ಅಧ್ಯಕ್ಷರಾದ ಯಶೋಧ ಮಜ್ಜಾರು,ಜಯಲತ ಬಾರಿಕೆ,ಪ್ರಮುಖರಾದ ಬೇಬಿ ಬಾರಿಕೆ,ಮಾಲತಿ ಎಂಡೆಸಾಗು,ಪೂರ್ಣಿಮ ಇದ್ಪಾಡಿ,ಸಭೆಯಲ್ಲಿ ಉಪಸ್ಥಿತರಿದ್ದರು.ಎಸ್ ಎಸ್ ಎಲ್ ಸಿ ಮತ್ತು ಪಿ ಯುಸಿ ಯಲ್ಲಿ ಹೆಚ್ಚು ಮಾರ್ಕ್ ತೆಗೆದವರಿಗೆ ಪ್ರತಿಭಾ ಪುರಸ್ಕಾರ ಮಾಡಿ ಗೌರವಿಸಲಾಯಿತು.
ಸತೀಶ್ ಯಚ್ ಕೆ ಮತ್ತು ಕುಮಾರಿ ಅದೀಕ್ಷ ಯಚ್ ಕೆ ಯವರು ಪ್ರತಿಭಾ ಪುರಸ್ಕಾರ ಪಡೆದವರ ಪರಿಚಯ ಓದಿದರು,ಕೆದಂಬಾಡಿ ಗ್ರಾಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಕುಂಬ್ರ ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು,ಸುರೇಶ್ ಸುಶ ತಿಂಗಳಾಡಿಯವರು ಇಬ್ಬರು ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ಪುಸ್ತಕ ಮತ್ತು ಎರಡು ಜತೆ ಯುನಿಫಾರ್ಮ್ ನೀಡಿದರು. ಕುಮಾರಿ ಅನುಷಾ ಕೊಡಿಯಡ್ಕ ಪ್ರಾರ್ಥನೆ ಮಾಡಿದರು.

See also  ಬೆಳ್ಳಾರೆ: ದಿ.ಪ್ರವೀಣ್‌ ನೆಟ್ಟಾರು ಮನೆಯಲ್ಲಿ ಸ್ಮೃತಿ ದಿನ, ಪ್ರವೀಣ್‌ ಪುತ್ಥಳಿಗೆ ಶಾಸಕಿಯಿಂದ ಪುಷ್ಪ ನಮನ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget