Latestಪುತ್ತೂರುಪುತ್ತೂರು

ಪುತ್ತೂರು:ಮನೆಯಲ್ಲಿ ವಿದ್ಯುತ್‌ ಶಾಕ್‌ ಗೊಳಗಾಗಿ ಮಹಿಳೆ ಮೃತ್ಯು:ಆಗಿದ್ದೇನು?

601

ನ್ಯೂಸ್ ನಾಟೌಟ್: ವಿದ್ಯುತ್‌ ಶಾಕ್‌ನಿಂದ ಮಹಿಳೆ ಮೃತಪಟ್ಟ ಘಟನೆ ಎ. 30ರಂದು ಪುತ್ತೂರಿನ ಅರಿಯಡ್ಕ ಗ್ರಾಮದ ಬೇಂಗತ್ತಡ್ಕದಲ್ಲಿ ಸಂಭವಿಸಿದೆ.ದೇವಪ್ಪ ನಾಯ್ಕ ಅವರ ಪತ್ನಿ ಭಾಗೀರಥಿ (59) ಮೃತರು ಎಂದು ಗುರುತಿಸಲಾಗಿದೆ.

ಆಗಿದ್ದೇನು?

ಎ. 30ರಂದು ಮಧ್ಯಾಹ್ನ ವೇಳೆ ಮನೆಯ ಟೇರಸ್ ಮೇಲೆ ತೆರಳಿದ್ದ ಭಾಗೀರಥಿ ಅವರು ಅದೇ ಸಂದರ್ಭದಲ್ಲಿ ಪಂಪ್ ಗೆ ಅಳವಡಿಸಿದ್ದ ವಯರ್ ಮೇಲೆ ಕಾಲಿಟ್ಟಿದ್ದಾರೆ. ಆ ವೇಳೆ ವಿದ್ಯುತ್‌ ಸ್ಪರ್ಶಿಸಿದ್ದು ಘಟನೆಗೆ ಕಾರಣ ಎನ್ನಲಾಗಿದೆ. ಮೃತರು ಪತಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

See also  ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ರಾ ಸೋನು ನಿಗಂ..? ಗಾಯಕನ ವಿರುದ್ಧ ದೂರು ದಾಖಲು..!
  Ad Widget   Ad Widget     Ad Widget   Ad Widget   Ad Widget   Ad Widget