ಕರಾವಳಿಪುತ್ತೂರುರಾಜಕೀಯ

ಪುತ್ತೂರು: ನಳಿನ್ ಕುಮಾರ್ ಕಟೀಲ್ ಮನೆಯಲ್ಲಿ 9 ದಿನಗಳ ವಿಶೇಷ ಪೂಜೆ, ಗುಟ್ಟಾಗಿ ಪೂಜೆ ನಡೆಸಲಾಗ್ತಿದೆ ಎಂದು ಸ್ಥಳೀಯರು ಹೇಳಿದ್ಯಾಕೆ..!?

249

ನ್ಯೂಸ್ ನಾಟೌಟ್:ಚುನಾವಣೆಯಲ್ಲಿ ಸೋತ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈಗ ದೇವರ ಮೊರೆ ಹೋದಂತಿದೆ.ರಾಜ್ಯಾಧ್ಯಕ್ಷರಿಗೆ ಸೇರಿದ ಪುತ್ತೂರು ಸಮೀಪದ ಸವಣೂರಿನ ಮನೆಯಲ್ಲಿ ವಿಶೇಷ ಹವನ ನಡೆಯುತ್ತಿದೆ ಎಂದು ವರದಿಯಾಗಿದೆ. ಸುಮಾರು 9 ದಿನಗಳ ಕಾಲ ಈ ವಿಶಿಷ್ಟ ಹವನ ನಡೆಯಲಿದೆ. ಜೂ.11ರಂದು ಪ್ರಾರಂಭವಾಗಿದ್ದು, ಜೂ.18ರವರೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಈ ಹೋಮದ ನೇತೃತ್ವವನ್ನು ವಿದ್ವಾನ್ ಬಾಲಕೃಷ್ಣ ಕಾರಂತ್ ವಹಿಸಿದ್ದಾರೆ ಎನ್ನಲಾಗಿದೆ. ಧಾರ್ಮಿಕ ಕಾರ್ಯಕ್ರಮದ ವಿವರ ಹೊರಗೆ ಹೋಗಬಾರದು ಎಂದು ಅತ್ಯಂತ ಗುಟ್ಟಾಗಿ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಜಮೀನಿನ ಒಳಗೆ ದ್ವಾರಗಳನ್ನು ಸಂಪೂರ್ಣವಾಗಿ ಮುಚ್ಚಿ ರಹಸ್ಯವನ್ನು ಕಾಪಾಡಲಾಗಿದೆ ಎಂದು ತಿಳಿದು ಬಂದಿದೆ. ಇದು ಜನರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇಷ್ಟೊಂದು ಗುಟ್ಟಲ್ಲಿ ಇದೆಂಥ ಪೂಜೆ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ. ಈ ಸೋಲಿಗೆ ನಳಿನ್ ಸೇರಿದಂತೆ ಪಕ್ಷದ ಕೆಲವು ನಾಯಕರು ತೆಗೆದುಕೊಂಡ ತಪ್ಪು ನಿರ್ಧಾರ ಕಾರಣ. ಇದರಿಂದ ಬಿಜೆಪಿಯ ವಿರುದ್ಧ ಪಕ್ಷದೊಳಗೇ ಸಾಕಷ್ಟು ಆಕ್ರೋಶ ಎದ್ದಿದೆ. ಪ್ರಮುಖರನ್ನು ಸೋಲಿಗೆ ಹೊಣೆಮಾಡಿ ಹೊರಗಟ್ಟಿ ಹೊಸಬರಿಗೆ ಬಿಜೆಪಿಯಲ್ಲಿ ಅವಕಾಶ ಮಾಡಿಕೊಡಬೇಕು ಅನ್ನುವ ಮಾತುಗಳು ಕೇಳಿ ಬರುತ್ತಿವೆ.

See also  ಕೆನರಾ ಬ್ಯಾಂಕ್ ಸಿಬ್ಬಂದಿ ಕೊರತೆ ಬಗ್ಗೆ 'ನ್ಯೂಸ್ ನಾಟೌಟ್' ವಿಶೇಷ ವರದಿ ಬೆನ್ನಲ್ಲೇ ಸಂಪಾಜೆಯಲ್ಲಿ ತುರ್ತು ಸಭೆ, ಮಾ.22ರಂದು ಪ್ರತಿಭಟನೆಗೆ ನಿರ್ಧಾರ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget