ಪುತ್ತೂರು

ಪುತ್ತೂರಿನ ವಿವೇಕಾನಂದ ಶಾಲೆಯಲ್ಲಿ ಯೋಗ ಶಿಬಿರ, ಯೋಗ ಜಾಗೃತಿ ಜಾಥಾ

277

ನ್ಯೂಸ್ ನಾಟೌಟ್: ಪುತ್ತೂರಿನ ವಿವೇಕಾನಂದ ಶಾಲೆಯಲ್ಲಿ ಎಸ್.ಪಿ.ವೈ.ಎಸ್.ಎಸ್ ಯೋಗ ಶಿಕ್ಷಣ ಸಮಿತಿಯಿಂದ ಏಪ್ರಿಲ್ 20 ರಿಂದ 23ರ ವರೆಗೆ ಯೋಗ ಶಿಬಿರ ನಡೆಯುತ್ತಿದ್ದು, ಇಂದು ಜಾಗೃತಿ ಮೆರವಣಿಗೆ ನಡೆಯುತ್ತಿದೆ.

ನಾಳೆಗೆ ಕೊನೆಗೊಳ್ಳಲಿರುವ ಈ ಕಾರ್ಯಗಾರದ ಪ್ರಯುಕ್ತ ಯೋಗ ಪಟುಗಳು, ವಿದ್ಯಾರ್ಥಿಗಳು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಎದುರು ಮೆರವಣಿಗೆ ನಡೆಸಿ ಜನರಲ್ಲಿ ಯೋಗದ ಜಾಗೃತಿ ಮೂಡಿಸಿದರು.

ಯೋಗದ ಮಹತ್ವವನ್ನು ಘೋಷಣೆಗಳ ಮೂಲಕ ಹೇಳುತ್ತಾ ಸಾಗಿದ ಮೆರವಣಿಗೆ ಜನರ ಗಮನ ಸೆಳೆಯಿತು. ಯೋಗ ಪಟು ಒಬ್ಬರು ಮಾರನಾಡಿ “ನನ್ನ ಕೋವಿಡ್-೧೯ ನಿವಾರಣೆಯಾದದ್ದೇ ಯೋಗಾಭ್ಯಾಸದಿಂದ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಇತರರು ಪಾಲ್ಗೊಂಡಿದ್ದರು.

See also  ಪುತ್ತೂರು: ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್ ರೈ ನಾಮಪತ್ರ ಸಲ್ಲಿಕೆ, ಅದ್ಧೂರಿ ರೋಡ್‌ ಶೋ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget