ಕರಾವಳಿಪುತ್ತೂರು

ಪುತ್ತೂರು: ಸರ್ಕಾರಿ ದಾಖಲೆಗಳ ನಕಲಿ ಜಾಲವನ್ನು ಭೇದಿಸಿದ ಪುತ್ತೂರು ತಾಪಂ ಇಓ ನೇತೃತ್ವದ ತಂಡ, ನಕಲಿ ದಾಖಲೆ, ನಕಲಿ ಸೀಲ್ ವಶಕ್ಕೆ

242

ನ್ಯೂಸ್ ನಾಟೌಟ್: ಸರ್ಕಾರಿ ದಾಖಲೆಗಳ ನಕಲಿ ಜಾಲವನ್ನು ಭೇದಿಸಿದ ಪುತ್ತೂರು ತಾಪಂ ಇಓ ನೇತೃತ್ವದ ತಂಡ ನಕಲಿ ದಾಖಲೆ, ನಕಲಿ ಸೀಲ್ ವಶಕ್ಕೆ ಪಡೆದುಕೊಂಡಿದೆ.

ಪುತ್ತೂರಿನ ಪಡೀಲಿನಲ್ಲಿ ಕಾರ್ಯಾಚರಿಸುತ್ತಿದ್ದ ವಿಶ್ವನಾಥ್ ಎಂಬವರಿಗೆ ಸೇರಿದ ಬಿ.ಬಿ ಇಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್ ಸೆಂಟರಿನಲ್ಲಿ ಅಕ್ರಮ ಜಾಲವನ್ನು ಪತ್ತೆ ಹಚ್ಚಲಾಗಿದೆ. ಸರ್ಕಾರದಿಂದ ಅನುಮತಿ‌ ಪಡೆದ ಗುತ್ತಿಗೆದಾರರು ಇವರಾಗಿದ್ದು, ಮೆಸ್ಕಾಂನ ಗುತ್ತಿಗೆ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದರು.

ವಿದ್ಯುತ್ ಗುತ್ತಿಗೆ ಕಾಮಗಾರಿ ನಿರ್ವಹಿಸುತ್ತಿದ್ದ ಈ ಅಂಗಡಿಯಲ್ಲಿ, ಪುತ್ತೂರು ನಗರಸಭೆ, ಕಡಬ ತಾಲೂಕು ಪಂಚಾಯತ್ ಹಾಗೂ ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತಿಗಳ ಸೀಲ್ ಗಳನ್ನೇ ಹೋಲುವ ನಕಲಿ ಸೀಲ್ ಗಳು‌ ಪತ್ತೆಯಾಗಿವೆ. ದಾಖಲೆ ಪತ್ರಗಳಿಗೆ ಫೋರ್ಜರಿ ಸಹಿ‌ ಹಾಕಿ, ಅದಕ್ಕೆ ನಕಲಿ ಸೀಲ್ ಗಳನ್ನು ಹಾಕಲಾಗುತ್ತಿತ್ತು. ಸಾರ್ವಜನಿಕ ದೂರಿನ‌ ಮೇರೆಗೆ ತಾಪಂ ಇಓ ನವೀನ್ ಭಂಡಾರಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, ಪರಿಶೀಲಿಸಿದಾಗ ವಂಚನೆ ಜಾಲ ಬೆಳಕಿಗೆ ಬಂದಿದೆ.

See also  ಸುಳ್ಯ: ಡಾ.ದೇವಿಪ್ರಸಾದ್ ಕಾನತ್ತೂ‌ರ್ ಕಾಂಗ್ರೆಸ್‌ ಸೇರ್ಪಡೆ,ಪಕ್ಷದ ಧ್ವಜ ನೀಡಿ ಬರಮಾಡಿಕೊಂಡ ಕಾಂಗ್ರೆಸ್‌ ನಾಯಕರು..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget