ಕರಾವಳಿಪುತ್ತೂರು

ಪುತ್ತೂರು: ಅತಿಥಿ ಶಿಕ್ಷಕಿಯಿಂದ ವಿದ್ಯಾರ್ಥಿ ಮೇಲೆ ಹಲ್ಲೆ! ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿ!

312

ನ್ಯೂಸ್ ನಾಟೌಟ್: ಅತಿಥಿ ಶಿಕ್ಷಕಿ ಕಬ್ಬಿಣದ ಸ್ಕೇಲ್‌ನಿಂದ ವಿದ್ಯಾರ್ಥಿಯೋರ್ವನ ಕೈ ಬೆರಳಿಗೆ ಹಲ್ಲೆ ನಡೆಸಿದ ಕಾರಣ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ಪುತ್ತೂರಿನ ನರಿಮೊಗರು ಶಾಲೆಯಲ್ಲಿ ನಡೆದಿದೆ.

ನರಿಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಯು ಮಧ್ಯಾಹ್ನ ಊಟ ಮಾಡಿದ ಮೇಲೆ ನೀರು ಕುಡಿಯಲು ಹೋಗಿದ್ದನು. ಈ ವೇಳೆ ವೀಣಾ ಎಂಬ ಅತಿಥಿ ಶಿಕ್ಷಕಿ ಪ್ರಶ್ನಿಸಿದ್ದರು, ನನಗೆ ಮತ್ತು ಇನ್ನೊಬ್ಬ ವಿದ್ಯಾರ್ಥಿಗೆ ಕಬ್ಬಿಣದ ಸ್ಕೇಲ್‌ನಿಂದ ಹೊಡೆದಿದ್ದು, ಬಲ ಕೈಯ ಬೆರಳ ತುದಿಗೆ ತಾಗಿ ಗಾಯವಾಗಿದೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾರೆ.

ಹಲ್ಲೆ ಮಾಡಿದ ಶಿಕ್ಷಕಿಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಶಿಕ್ಷಣಾಧಿಕಾರಿಗೆ ದೂರು ನೀಡಲು ನಿರ್ಧರಿಸಲಾಗಿದೆ ವರದಿ ತಿಳಿಸಿದೆ.

See also  ಪಂಚಾಯತ್ ವಾಹನ ತಡೆದು ಮುತ್ತಿಗೆ ಹಾಕಿದ ಅಜ್ಜಾವರ ದಲಿತ ಕಾಲೊನಿ ಜನ..! ವಿಡಿಯೋ ವೀಕ್ಷಿಸಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget