ಕರಾವಳಿವೈರಲ್ ನ್ಯೂಸ್

ಪುತ್ತೂರು: ಸ್ಪೀಕರ್ ಯು.ಟಿ ಖಾದರ್ ನಾಗಾರಾಧನೆಗೆ ಭೂಮಿ ಬಿಟ್ಟುಕೊಟ್ಟದ್ದೇಕೆ? ಏನಿದು ತುಳುನಾಡ ಕೋಮು ಸೌಹಾರ್ದತೆಯ ಕಥೆ?

286

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆ ಕೋಮುಗಲಬೆಗಳಿಗೆ ಮಾತ್ರವಲ್ಲ ಕೋಮು ಸೌಹಾರ್ದತೆಗೂ ಸುದ್ದಿಯಾಗುತ್ತಿದೆ. ಈ ಹಿಂದೆ ಹಿಂದೂ ಮುಸ್ಲಿಂ ಸೇರಿ ಸಹಬಾಳ್ವೆ ನಡೆಸಿದ ಅದೆಷ್ಟೋ ಉದಾಹರಣೆಗಳು ದಕ್ಷಣಕನ್ನಡದಲ್ಲಿವೆ. ಅಂತೆಯೇ ಇಲ್ಲಿನ ದೇವಾರಾಧನೆ ನಾಗಾರಾಧನೆಗಳಲ್ಲೂ ಇಲ್ಲಿನ ಜನರು ಜಾತಿ ಧರ್ಮಗಳ ಅಂತರ ಮರೆತು ಒಂದಾಗಿ ಆಚರಿಸುವುದು ಮತ್ತು ಸಹಕಾರ ನೀಡುವುದು ವಿಶೇಷ ಮತ್ತು ಪ್ರಶಂಸನೀಯ. ಈ ನಾಗರಪಂಚಮಿ ದಿನದಂದು ಈ ಕಾರಣಕ್ಕೆ ಸ್ಪೀಕರ್ ಯು.ಟಿ.ಖಾದರ್ ಸುದ್ದಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುತ್ತೂರು ಸಮೀಪ ಹಳ್ಳಿ ಪ್ರದೇಶ ಪುಣಚದ ಪರಿಯಲ್ತಡ್ಕ ಎಂಬಲ್ಲಿ ಸ್ಪೀಕರ್ ಯು.ಟಿ.ಖಾದರ್ ಗೆ ಸೇರಿದ ಜಾಗವಿದೆ. ಅಡಕೆ ತೆಂಗು ಸಹಿತ ವಿವಿಧ ಬೆಳೆಗಳನ್ನು ಅಲ್ಲಿ ಬೆಳೆದಿದ್ದು, ಆ ಜಮೀನಿನ ಒಂದು ಭಾಗದಲ್ಲಿ ಈಗಲೂ ನಾಗಾರಾಧನೆ ಹಿಂದೂ ಮುಸ್ಲಿಂ ಸಹಕಾರದೊಂದಿಗೆ ನಡೆಯುತ್ತಿದೆ.

ಹಿರಿಯರ ಕಾಲದಲ್ಲಿ ಖಾದರ್ ಇರುವ ಜಾಗ ಹಿಂದೂಗಳಾದ ದಳವಾಯಿ ಕುಟುಂಬದ ಅಧೀನದಲ್ಲಿತ್ತು. ಭೂಮಸೂದೆ ಕಾನೂನಿನಲ್ಲಿ ಖಾದರ್ ಕುಟುಂಬದ ಹಿರಿಯರಿಗೆ ಆ ಜಮೀನು ಸಿಕ್ಕಿತು. ಪಾಲು ಮಾಡುವಾಗ ಅದು ಖಾದರ್ ಪಾಲಾಯಿತು. ದಳವಾಯಿ ಕುಟುಂಬದ ನಾಗನ ಕಟ್ಟೆ ಅದೇ ಜಮೀನಿನಲ್ಲಿತ್ತು. ದಳವಾಯಿ ಕುಟುಂಬದ ನಾಗಸಾನಿಧ್ಯ ಮುಸ್ಲಿಂ ಧರ್ಮದವರ ಸ್ಥಳದಲ್ಲಿರುವುದರಿಂದ ಅವರು ಬೇರೆ ಕಡೆ ಆರಾಧನೆ ಮಾಡುತ್ತಿದ್ದರು.

ಮೂಲಸ್ಥಾನದ ನಾಗಕಟ್ಟೆಯಲ್ಲಿ ಪೂಜೆಯಾಗದೇ ಇರುವುದರಿಂದ ದಳವಾಯಿ ಕುಟುಂಬಕ್ಕೆ ಸಮಸ್ಯೆ ತಲೆದೋರಿತು. ಅಷ್ಟಮಂಗಳ ಪ್ರಶ್ನೆ ಇಟ್ಟಾಗ ಮೂಲಜಾಗದಲ್ಲಿ ಪೂಜೆ ನಡೆಯಬೇಕೆಂದು ಕಂಡುಬಂತಾದರೂ ಅವರಿಗೆ ಆರಾಧನೆಗೆ ತೊಡಕಾಗಿತ್ತು.

ದಳವಾಯಿ ಕುಟುಂಬ ನಾಗನಕಟ್ಟೆಯ ಆ ಜಾಗದ 10 ಸೆಂಟ್ಸ್ ಸ್ಥಳ ಖರೀದಿಗೆ ಯು.ಟಿ.ಖಾದರ್ ಬಳಿ ಬೇಡಿಕೆ ಇಟ್ಟಿದ್ದರು. ವಿಷಯ ತಿಳಿದ ಖಾದರ್ ಅವರು ಕೇಳಿದ 10 ಸೆಂಟ್ಸ್ ಗೆ 10 ಸೆಂಟ್ಸ್ ಸೇರಿಸಿ ಒಟ್ಟು 20 ಸೆಂಟ್ಸ್ ಸ್ಥಳವನ್ನು ದಳವಾಯಿ ಕುಟುಂಬಕ್ಕೆ ಉಚಿತವಾಗಿ ಬಿಟ್ಟುಕೊಟ್ಟಿದ್ದು ಅಲ್ಲಿ ವರ್ಷಂಪ್ರತಿ ನಾಗಾರಾಧನೆ ನಡೆಯುತ್ತಿದೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಇದೀಗ ಹಲವು ವರ್ಷಗಳಿಂದ ಅಲ್ಲಿ ನಾಗಾರಾಧನೆ ನಡೆಯುತ್ತಿದ್ದು, ನಾಗರ ಪಂಚಮಿಯ ಈ ದಿನ ದಳವಾಯಿ ಕುಟುಂಬಿಕರೆಲ್ಲಾ ಅಲ್ಲಿ ಬಂದು ಸೇರುತ್ತಾರೆ ಎನ್ನಲಾಗಿದೆ

See also  ಸುಳ್ಯ:NMCಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget