ನ್ಯೂಸ್ ನಾಟೌಟ್: ಪುತ್ತೂರು ವಿಧಾನಸಭಾ ಕ್ಷೇತ್ರ ಈ ಸಲ ಭಾರಿ ಪೈಪೋಟಿಯಿಂದ ಕೂಡಿದೆ. ಒಂದು ಕಡೆ ಆಶಾ ತಿಮ್ಮಪ್ಪ ಮತ್ತೊಂದು ಕಡೆ ಅಶೋಕ್ ರೈ ಹಾಗೂ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ನಡುವೆ ತ್ರಿಕೋನ ಸ್ಪರ್ಧೆ ಇದೆ.
ಈ ಮೂವರೊಳಗೆ ಗೆಲುವು ಯಾರಿಗೆ ಅನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಮೂವರಿಗೂ ಗೆಲುವಿನ ಸಮಾನ ಅವಕಾಶವಿದೆ ಅಂತಲೇ ಹೇಳಲಾಗುತ್ತಿದೆ. ಹೀಗಾಗಿ ಈ ಕ್ಷೇತ್ರ ಸಹಜ ಕುತೂಹಲಕ್ಕೆ ಕಾರಣವಾಗಿದೆ.
ಈ ನಡುವೆ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಬ್ಯಾಟ್ ಚಿಹ್ನೆ ಮೂಲಕ ಕಣಕ್ಕೆ ಇಳಿಯಲಿದ್ದಾರೆ. ಈ ಮೂಲಕ ಎದುರಾಳಿಗಳ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮುನ್ಸೂಚನೆಯನ್ನು ನೀಡಿದ್ದಾರೆ.