ಕ್ರೈಂಪುತ್ತೂರುವೈರಲ್ ನ್ಯೂಸ್

ಪುತ್ತೂರು: ಪಿಯು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ..!ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡ ಯುವತಿ..!

50
Spread the love

ನ್ಯೂಸ್ ನಾಟೌಟ್: ಪುತ್ತೂರು ನಗರದ ಖಾಸಗಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.9ರಂದು ಸಂಜೆ ನಡೆದಿದೆ.

ನರಿಮೊಗರು ಕೂಡುರಸ್ತೆಯ ಕೇಶವ ಜೋಗಿ ಎಂಬವರ ಪುತ್ರಿ ಸಂತ ಪಿಲೋಮಿನಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ದೀಕ್ಷಿತಾ(17) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು.

ದೀಕ್ಷಿತಾ ಗುರುವಾರ(ಜ.9) ಸಂಜೆ ಕಾಲೇಜಿನಿಂದ ಮನೆಗೆ ಮರಳಿದ ಬಳಿಕ, ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ನಗರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

See also  ತಿರುಪತಿ ದೇಗುಲದಲ್ಲಿ ಕಾಲ್ತುಳಿತಕ್ಕೆ ಕರ್ನಾಟಕದ ಮಹಿಳೆ ಸಾವು..! ಒಟ್ಟು 6 ಮಂದಿ ಮೃತ್ಯು, 48 ಜನರಿಗೆ ಗಾಯ..!
  Ad Widget   Ad Widget   Ad Widget