ಕರಾವಳಿಕ್ರೈಂಪುತ್ತೂರುಸುಳ್ಯ

ಪುತ್ತೂರು: ರಿಕ್ಷಾ ಏರಿದ ಹುಡುಗಿ ಜೊತೆ ಅಸಭ್ಯ ವರ್ತನೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲು

175

ನ್ಯೂಸ್ ನಾಟೌಟ್: ಉಪ್ಪಿನಂಗಡಿಯಿಂದ ಪುತ್ತೂರಿಗೆ ಅಟೋರಿಕ್ಷಾದಲ್ಲಿ ಬಂದ ಯುವತಿಯೊಂದಿಗೆ ಚಾಲಕ ಅನುಚಿತವಾಗಿ ವರ್ತಿಸಿರುವ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.

ಈ ಬಗ್ಗೆ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯೋರ್ವರು ಉಪ್ಪಿನಂಗಡಿಯಲ್ಲಿ ಕೆಲಸ ಮುಗಿಸಿ ಪುತ್ತೂರಿನ ತನ್ನ ಮನೆಗೆ ಆಟೋ ರಿಕ್ಷಾವೊಂದರಲ್ಲಿ ಬಂದಿದ್ದಾರೆ. ಹಾಗೆ ಬಂದವರು ಮನೆಯ ಬಳಿ ರಿಕ್ಷಾದಿಂದ ಇಳಿದಾಗ ರಿಕ್ಷಾ ಚಾಲಕ ಅನುಚಿತವಾಗಿ ವರ್ತಿಸಿದ್ದಾಗಿ ಆರೋಪಿಸಲಾಗಿದೆ.

ಈ ಕುರಿತು ನೊಂದ ಯುವತಿಯು ಆಟೋ ರಿಕ್ಷಾದ ನೋಂದಣಿ ಸಂಖ್ಯೆ ನಮೂದಿಸಿ ಚಾಲಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

https://newsnotout.com/2023/11/govt-job-training-cource-ircm/
https://newsnotout.com/2023/11/shiva-temple-tunnel-issue-worker/
See also  ಸುಳ್ಯ: 6-7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ಬಲೆಗೆ, ಶರೀಫ್ ಸಿಕ್ಕಿಬಿದ್ದಿದ್ದು ಹೇಗೆ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget